ಸೋಮಸುಂದರ್ ವಿರುದ್ಧ ಭೂ ಆರೋಪ
ಮೈಸೂರು: ಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್ ಹಾಗೂ ಅವರ ಕುಟುಂಬದ ವಿರುದ್ಧ ಸುಳ್ಳು ಭೂ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದಿದೆ. ಕ್ಯಾತಮಾರನಹಳ್ಳಿ ಗ್ರಾಮದ ಸರ್ವೆ ನಂ. 191/1ರ ಪೈಕಿ 4 ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಪಾಲಿಕೆ ಮಾಜಿ ಸದಸ್ಯ ಸೋಮಸುಂದರ್ ಎಂಬವರು ಸುಳ್ಳು ದಾಖಲೆ ಸೃಷ್ಟಿಸಿ ತಮಗೆ ಹಕ್ಕಿಲ್ಲದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ, ಕರ್ನಾಟಕ ರಾಜ್ಯ ದಸಂಸ, ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಆರೋಪಿಸಿದರು.
ನಿವೇಶನ ಹಿಂಪಡೆಯುವಂತೆ ಆಗ್ರಹ
ಮೈಸೂರು: ಎಂಡಿಎ ಹಾಗೂ ಕೆಎಚ್ಬಿಗೆ ಸುಳ್ಳು ದಾಖಲೆ ನೀಡಿ ಡಾ.ಎಸ್.ಪಿ. ಯೋಗಣ್ಣ ದಂಪತಿ ಕೋಟ್ಯಂತರ ಬೆಲೆಬಾಳುವ ಸಿಎ ನಿವೇಶನ ಪಡೆದುಕೊಂಡಿರುವುದನ್ನು ಕೂಡಲೇ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಂ ಆಗ್ರಹಿಸಿದ್ದಾರೆ. ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟಿರುವ ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ ಕಬಳಿಸಿರುವ ಸುಧಾ ಯೋಗಣ್ಣ ಮತ್ತು ಡಾ.ಎಸ್.ಪಿ. ಯೋಗಣ್ಣ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದರು.