ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹುಲಿ ಚರ್ಮ ಕಳ್ಳ ಸಾಗಣೆ: ಇಬ್ಬರ ಸೆರೆ

Vishwanath S
Updated On : 28 Jun 2013, 11:39 am

ಪಾಂಡವಪುರ: ಸುಮಾರು 350 ಹುಲಿ ಚರ್ಮಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಾಂಡವಪುರ ಎಸ್‌ಐ ನರೇಂದ್ರಕುಮಾರ್ ಮತ್ತು ಸಿಬ್ಬಂದಿ ಹುಣಸೂರು ಬಳಿಯ ಪಕ್ಷಿರಾಜಪುರ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 350 ಹುಲಿ ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಾದ ಬೀರರಾಜು ಹಾಗೂ ಗೋಪಿ ಅವರುಗಳನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ತಾವು ದನಗಳ ಚರ್ಮಕ್ಕೆ ಹುಲಿ ಬಣ್ಣ ಬಳಿದು ಮೋಸ ಮಾಡಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ವಶಪಡಿಸಿಕೊಳ್ಳಲಾದ ಎಲ್ಲ 350 ಚರ್ಮಗಳು ಹುಲಿಗಳದ್ದೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement