ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಾಬಗೆರೆ ಗ್ರಾಮದಲ್ಲಿ ಡೆಂಘೀ ಬಗ್ಗೆ ಅರಿವು

Vishwanath S
Updated On : 30 Jun 2013, 12:29 pm

ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಜಾಬಗೆರೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯು ಡೆಂಘೀ ಜ್ವರ ಕುರಿತು ಜಾಗೃತಿ ಜಾಥಾ ನಡೆಸಿ ಗ್ರಾಮಸ್ಥರ ಗಮನ ಸೆಳೆದರು.
ಜಾಥಾದಲ್ಲಿ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಜಾಥಾದಲ್ಲಿ ಫಲಕ ಹಿಡಿದು, ಸ್ವಚ್ಛತೆ ಕುರಿತು ಘೋಷಣೆ ಕೂಗಿದರು. ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಂ. ಮಹದೇವಪ್ಪ ರೋಗ ಹರಡುವ ಬಗ್ಗೆ, ರೋಗ ಲಕ್ಷಣ, ನಿರ್ಮೂಲನೆ, ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ಮನೆ-ಮನೆಗೆ ಮಾಹಿತಿ: ಗಾವಡಗೆರೆ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮಮತಾ, ಡಾ. ಇಂದಿರಾ ಹಾಗೂ ಆರೋಗ್ಯ ಕಾರ್ಯಕರ್ತರು ಗ್ರಾಮದ ಬೀದಿಗಳಲ್ಲಿ ಅಡ್ಡಾಡಿ, ಜನರ ಗುಂಪು ಸೇರಿಸಿ ಮನೆಯಲ್ಲಿ ನೀರಿನ ಸಂಗ್ರಹಣೆ, ಸೊಳ್ಳೆ ಉತ್ಪಾದನೆ ಕ್ರಿಯೆಗಳ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ಪ್ರಾತ್ಯಕ್ಷತೆ ನೀಡಿದರು. ಸಮುದಾಯದ ಸಹಕಾರದಿಂದ ಮಾತ್ರ ಆರೋಗ್ಯ ನೈರ್ಮಲ್ಯ ಕಾಪಾಡಲು ಸಾಧ್ಯವೆಂದು ಮನವರಿಕೆ ಮಾಡಿಕೊಟ್ಟರು. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement