ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದಿನಿಂದ ಕೃಷಿಕರಿಗೆ ಸಲಹೆ

Parashurama
Updated On : 1 Mar 2013, 10:37 am

ಮೈಸೂರು: ಜಿಲ್ಲೆಯಲ್ಲಿ ಮಾ. 2 ರಿಂದ 5 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲದಿರುವುದರಿಂದ ಈ ಅವಧಿಯಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷ ಡಾ.ಸಿ. ಗೋವಿಂದರಾವ್, ಸಹ ಸಂಶೋಧಕ ಎನ್. ನರೇಂದ್ರ ಬಾಬು ತಿಳಿಸಿದ್ದಾರೆ.ತೆಂಗು ಬೆಳೆಗಾರರು ಕಂಕಳು ಕೊಳೆ ರೋಗ ಮತ್ತು ಸುಳಿ ಕೊಳೆ ರೋಗ  ತಡೆಗಟ್ಟಲು 4 ಗ್ರಾಂ ಕಾಫರ್ ಆಕ್ಸಿ ಕ್ಲೋರೈಡ್ ಔಷಧಿಯನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿ ಗಿಡಕ್ಕೂ 15 ರಿಂದ 20 ಲೀ. ದ್ರಾವಣವನ್ನು ಸುಳಿ ಮತ್ತು ಕಂಕಳಕ್ಕೆ ಚೆನ್ನಾಗಿ ತೋಯ್ಯುವಂತೆ ಸುರಿಯಬೇಕು. ಹಾಗೆ ಸಪೋಟ ಬೆಳೆಗೆ ಹಣ್ಣು ಕೊರಕದ ಬಾಧೆ ಕಂಡುಬಂದಲ್ಲಿ 20 ಮಿ.ಲೀ. ಮೆಲಾಥೀಯಾನ್ 50 ಇ.ಸಿ 10 ಲೀ. ನೀರಿಗೆ ಬೆರೆಸಿ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ. ಮೊ. 8095227713 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments