ಎಪಿಎಂಸಿಗೆ 5 ಕೋಟಿ ಹೆಚ್ಚುವರಿ ಆದಾಯ
ಮೈಸೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಎಚ್.ಎಸ್. ನಾಗರಾಜ ಮತ್ತು ಮಾಜಿ ಉಪಾಧ್ಯಕ್ಷ ಹೊನ್ನಗಿರಿಗೌಡ ಹಾಗೂ ಸದಸ್ಯರು ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ.
2010- 11ನೇ ಸಾಲಿನಲ್ಲಿ ಸಮಿತಿಯ ಒಟ್ಟು ಆದಾಯ 7.04 ಕೋಟಿ ಇತ್ತು. 2011- 12ನೇ ಸಾಲಿನಲ್ಲಿ 12.07 ಕೋಟಿ ಆದಾಯ ಬಂದಿದ್ದು, 5.02 ಕೋಟಿಗಳ ಆದಾಯ ಹೆಚ್ಚುವರಿಯಾಗಿ ಬಂದಿದೆ. 2011- 12ನೇ ಸಾಲಿನಲ್ಲಿ 4.21 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿ, ಮಾರುಕಟ್ಟೆ ಪ್ರಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮುಕ್ತಾಯಗೊಳಿಸಿದೆ ಎಂದು ನಾಗರಾಜು ಹೇಳಿದರು.
2012- 13ನೇ ಸಾಲಿನಲ್ಲಿ 4.25 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿ, ಮಾರುಕಟ್ಟೆ ಪ್ರಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ಹಿಂದೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ 255 ಲಕ್ಷಗಳ ಸಹಾಯಧನದಲ್ಲಿ ಬಂಡಿಪಾಳ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಹೊಸದಾಗಿ ನಿರ್ಮಿಸಿ ವಹಿವಾಟನ್ನು ಜೂ. 1ರಿಂದ ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ.
ಎನ್ಸಿಡಿಇಎಕ್ಸ್ ಸಾಫ್ಟ್ವೇರ್ ಇ- ಟೆಂಡರಿಂಗ್ ವ್ಯವಸ್ಥೆ ಆಧುನೀಕರಣಗೊಳಿಸಲಾಗಿದೆ. 80 ಲಕ್ಷಗಳ ವೆಚ್ಚದಲ್ಲಿ ಬಯೋಗ್ಯಾಸ್ ನಿರ್ವಹಣಾ ಘಟಕ ಸ್ಥಾಪಿಸಲು ಕ್ರಿಯಾ ಯೋಜನೆಯಲ್ಲಿ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ 70 ಲಕ್ಷಗಳ ವೆಚ್ಚದಲ್ಲಿ ರೈತ ಭವನ ನಿರ್ಮಾಣ ಮಾಡಲು ಕ್ರಿಯಾಯೋಜನೆಯಲ್ಲಿ ಮಂಜೂರಾತಿ ಪಡೆದುಕೊಳ್ಳಲಾಗಿದೆ.
ಅರಣ್ಯ ಇಲಾಖೆ ಸಹಯೋಗದೊಂದಿಗೆ ಮಾರುಕಟ್ಟೆ ಪ್ರಾಂಗಣದಲ್ಲಿ ಸಾವಿರ ನೆರಳಿನ ಗಿಡ ನೆಡಲಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವಾಟರ್ ಫ್ಯೂರಿಫಯರ್ ಯಂತ್ರ ಅಳವಡಿಸಿದೆ. ರೈತ ಸಂಜೀವಿನಿ ಯೋಜನೆಯಡಿಯಲ್ಲಿ 4 ಫಲಾನುಭವಿಗಳಿಗೆ 1.36 ಲಕ್ಷ ವಿತರಿಸಿದೆ. ಜನಶ್ರೀ ವಿಮಾ ಯೋಜನೆಯಡಿಯಲ್ಲಿ ಇಬ್ಬರು ಫಲಾನುಭವಿಗಳಿಗೆ 59,998 ವಿತರಿಸಿದೆ. ಜನಶ್ರೀ ವಿಮಾ ಯೋಜನೆಯಡಿಯಲ್ಲಿ 83 ಜನ ಹಮಾಲರ ಮಕ್ಕಳಿಗೆ 99,600 ವಿದ್ಯಾರ್ಥಿ ವೇತನ ವಿತರಿಸಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ 30 ಲಕ್ಷಗಳ ವೆಚ್ಚದಲ್ಲಿ 3 ಸಂಖ್ಯೆಯ ಪ್ರವೇಶ ದ್ವಾರಗಳಿಗೆ ಬೃಹತ್ತಾದ ಕಮಾನು ಗೇಟ್ ನಿರ್ಮಿಸಲು ಕ್ರಿಯಾಯೋಜನೆಯಲ್ಲಿ ಮಂಜೂರಾತಿ ಪಡೆದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.