ಕರು ಮೇಲೆ ಚಿರತೆ ದಾಳಿ
ಹುಣಸೂರು: ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಕಾಡಂಚಿನ ಗ್ರಾಮ ಕೆ.ಜಿ. ಹೆಬ್ಬನಕುಪ್ಪೆಯಲ್ಲಿ ನಡೆದಿದೆ.
ನಾಗರಹೋಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಕೆ.ಜಿ. ಹೆಬ್ಬನಕುಪ್ಪೆ ಗ್ರಾಮದ ಮಾವಿತೋಟದ ಮಾಲೀಕ ಥಾಮಸ್ ಆಂಟೋನಿತರಗನ್ ಅವರ ಕರು ಗಾಯಗೊಂಡಿದೆ.
ಈ ಬಗ್ಗೆ ಕಚುವಿಹಳ್ಳಿ ಶ್ರೇಣಿಯ ವನಪಾಲಕ ರಶೀದ್ ಮತ್ತು ಶಿವಶಂಕರ್ ಸ್ಥಳ ಪರಿಶೀಲನೆ ಮಾಡಿದ್ದು, ಪರಿವೀಕ್ಷಕ ಚಂದ್ರಪ್ಪ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕರು ಸಾವು- ಬದುಕಿನೊಡನೆ ಹೋರಾಡುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.