ಸರ್ಕಾರದ ಯೋಜನೆ ಜನರಿಗೆ ತಲುಪಿಸಿ
ಭೇರ್ಯ: ಬ್ಯಾಂಕ್ ವ್ಯವಸ್ಥಾಪಕರಾಗಿ ಸೇವೆ ಮಾಡಿದರೆ ಸಾಲದು, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಿಳಿಸಿ ಅದರ ಪ್ರಯೋಜನ ಪಡೆಯುವಂತೆ ಮಾಡಿದಾಗ ಬ್ಯಾಂಕ್ ಮುಂದುವರಿಯಲು ಸಾಧ್ಯ ಎಂದು ಗ್ರಾಪಂ ಸದಸ್ಯ ಬಿ.ಎಚ್. ಮಹದೇವು ಹೇಳಿದರು. ಇಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾಗಿ ನಿವೃತ್ತರಾದ ಬಿ.ಎನ್. ನಾಗೇಂದ್ರಪ್ಪ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ನಾಗೇಂದ್ರಪ್ಪ ಸರ್ಕಾರದ ಸಹಾಯಧನ, ಪ. ಜಾತಿ, ಜನಾಂಗದವರಿಗೆ ದೊರೆಯುವ ಸಾಲ- ಸವಲತ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಿಳಿಸಿ, ಸ್ಥಳದಲ್ಲೆ ಮಂಜೂರು ಮಾಡುತ್ತಿದ್ದರು ಎಂದು ಹೇಳಿದ ಅವರು, ಭೇರ್ಯದ ಕಾವೇರಿ ಗ್ರಾಮೀಣ ಬ್ಯಾಂಕ್ ಮೊದಲು 6 ಕೋಟಿ ಠೇವಣಿ ಹಣದೊಂದಿಗೆ 60 ಲಕ್ಷ ಲಾಭದಲ್ಲಿತ್ತು. ಆದರೆ, ಇವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ 18 ಕೋಟಿ ಹಣವನ್ನು ಗ್ರಾಹಕರಿಂದ ಠೇವಣಿ ಮಾಡಿಸಿ 1.80 ಕೋಟಿ ಲಾಭ ಗಳಿಸುವ ನಿಟ್ಟಿನಲ್ಲಿ ಬ್ಯಾಂಕ್ನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು. ಬಿ.ಎನ್. ನಾಗೇಂದ್ರಪ್ಪ ಅವರನ್ನು ಅಭಿನಂದಿಸಲಾಯಿತು. ಎಸ್. ಗಾಂಧಿ, ಹನೀಫ್ಗೌಡ, ಮುಶೀರ್ಖಾನ್, ಜಯಕೀರ್ತಿ, ರಾಜಶೇಖರ್, ಜವರೇಗೌಡ, ಸುಮಾ, ಮಂಜುನಾಥ, ಜಗದೀಶ್, ಲೋಕೇಶ್, ರವಿ, ಚಿದಂಬರ ನಾಯಕ, ಚೆಲುವರಾಜ್, ವಕೀಲ ಸತೀಶ್, ಬೈರೇಗೌಡ, ಅಲ್ತಾಫ್ ಖಾನ್, ಖಾಲಿದ್ ಪಾಷಾ, ಬಸವರಾಜಪ್ಪ, ಜವರಶೆಟ್ಟಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.