ಪ್ರಚಾರ ಬಲು ಜೋರು
ಟಿ. ನರಸೀಪುರ: ಪಪಂ ಚುನಾವಣೆ ಪ್ರಚಾರ ರಂಗೇರುತ್ತಿದ್ದು, ರಜಾ ದಿನವಾದ ಭಾನುವಾರ ರಾಜ್ಯದ ಪ್ರಮುಖ ಮೂರು ಪಕ್ಷಗಳಾದ ಜೆಡಿಎಸ್, ಬಿಜೆಪಿ ಹಾಗೂ ಕೆಜೆಪಿಯಿಂದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಯಿತು.
ಪಟ್ಟಣದ ರಸ್ತೆಗಳೆಲ್ಲವೂ ರಾಜಕಾರಣಿಗಳಿಂದ ಕಳೆಗಟ್ಟಿತ್ತು. ಮತದಾನಕ್ಕೆ 4 ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಮತದಾರರು ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆ ಮಾಡುವಂತೆ ಕರಪತ್ರ ಹಿಡಿದು ಆಯಾ ವಾರ್ಡುಗಳ ಅಭ್ಯರ್ಥಿಗಳೊಂದಿಗೆ ಮನೆ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸಿದರು.
ಕೆಜೆಪಿ ಪಾದಯಾತ್ರೆ: ಕರ್ನಾಟಕ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಬಿ.ಎಂ. ರಾಮು ಪಕ್ಷದ ಕಚೇರಿ ಮುಂಭಾಗ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್, ರಾಜ್ಯ ಕಾರ್ಯದರ್ಶಿ ಎನ್. ಫಣೀಶ್ ಅವರೊಂದಿಗೆ 11ನೇ ವಾರ್ಡಿನ ಕೆಜೆಪಿ ಅಭ್ಯರ್ಥಿ ಮಂಜುಳಾ ನಂಜುಂಡಸ್ವಾಮಿ ಪರ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕೆಂದು ಬಿಎಸ್ವೈ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜಕೀಯದಲ್ಲಿ ಬದಲಾವಣೆ ತರಲು ಕೆಜೆಪಿಯನ್ನು ಈ ಚುನಾವಣೆಯಲ್ಲಿಯೇ ಅಧಿಕಾರದತ್ತ ಕೊಂಡೊಯ್ಯಬೇಕು ಎಂದು ಜಿಲ್ಲಾಧ್ಯಕ್ಷ ಬಿ.ಎಂ. ರಾಮು ಮನವಿ ಮಾಡಿದರು.
ಚುನಾವಣಾ ವೀಕ್ಷಕ ಎಲ್.ಆರ್. ಮಹದೇವಸ್ವಾಮಿ, ಕ್ಷೇತ್ರಾಧ್ಯಕ್ಷ ವಿರೇಶ್, ಅನುಪಮಾ ವಿರೇಶ್, ತಾಪಂ ಮಾಜಿ ಸದಸ್ಯ ಬೆ.ಗು. ಶಿವಸ್ವಾಮಿ, ಎಸ್ಟಿ ಘಟಕದ ಅಧ್ಯಕ್ಷ ಕುಮಾರ್, ಮುಖಂಡರಾದ ನೂತನ್, ಮಹದೇವಸ್ವಾಮಿ, ಚಂದ್ರು, ನಿಂಗರಾಜು ಇದ್ದರು.
ಜೆಡಿಎಸ್ ಪ್ರಚಾರ: ಜೆಡಿಎಸ್ನ ಹಿರಿಯ ಮುಖಂಡ ಎಂ.ಸಿ. ಸುಂದರೇಶನ್ ಅವರು ಪಟ್ಟಣದ ಪೇಟೆ ಕೇರಿಯಲ್ಲಿ 1ನೇ ವಾರ್ಡಿನ ಅಭ್ಯರ್ಥಿ ಸರೋಜಮ್ಮ ಪರ ಪಾದಯಾತ್ರೆ ಮೂಲಕ ಮತಯಾಚಿಸಿದರು.
ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರವಧಿಯಲ್ಲಿ ಆದಂತಹ ಅಭಿವೃದ್ಧಿ ಕಾರ್ಯಕ್ರಮವನ್ನು ನೋಡಿರುವ ಜನತೆ ನಮಗೆ ಆಶೀರ್ವದಿಸಬೇಕು ಎಂದು ಕೋರಿದರು.
ನಿವೃತ್ತ ಎಸಿಪಿ ಚಲುವರಾಜು, ಜೆಡಿಎಸ್ ಕ್ಷೇತ್ರಾಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಮುಖಂಡರಾದ ಚನ್ನೇಗೌಡ, ಯಶೋಧ ಬಾಬು, ತಿರುಮಕೂಡಲು ಜಯರಾಮು, ಶ್ರೀನಿವಾಸ್, ಕೃಷ್ಣಾಪುರ ಮರಿಸ್ವಾಮಿ, ಎಂ. ಶಿವಪ್ರಸಾದ್, ಆರ್. ಬಸವರಾಜು, ಶೇಷಯ್ಯ ಇದ್ದರು.
ಬಿಜೆಪಿ ಮತಯಾಚನೆ: ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯಲ್ಲಿ 11ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಶಾಂತಮ್ಮ ಪರ ವಿಧಾನಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಮತ್ತು ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ ಮತಯಾಚಿಸಿದರು.
ಮಾಜಿ ಶಾಸಕ ಸಿ. ರಮೇಶ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆ ಮುಂದಿಟ್ಟುಕೊಂಡು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಾಚಿಸುತ್ತಿದ್ದೇವೆ ಎಂದರು.
ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಮುಖಂಡರಾದ ಎನ್. ಲೋಕೇಶ್, ಬಸವರಾಜು, ಮಹದೇವ, ವಾಟಾಳು ಗುರುಪಾದ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.