'ಇತಿಹಾಸ ಸದಾ ಹರಿಯುವ ನೀರು'
ಕ.ಪ್ರ.ವಾರ್ತೆ ್ಣ ಸಾಲಿಗ್ರಾಮ ್ಣ ಮಾ.19
ತಾಯಿಯ ತುತ್ತು ಮತ್ತು ಇತಿಹಾಸಕ್ಕೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಹಾರಾಣಿ ಕಾಲೇಜಿನ ಪ್ರೊ.ಎಚ್.ಎಂ. ಬಸವರಾಜು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಇತಿಹಾಸ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಸ್ತುವಿಗೂ ತನ್ನದೆ ಆದ ಮೌಲ್ಯವಿದೆ. ಇತಿಹಾಸ ತನ್ನದೆ ಆದ ವೈಶಿಷ್ಟತೆ ಹೊಂದಿದ್ದು, ಎಲ್ಲ ವಿಧಗಳಲ್ಲಿಯೂ ಇದೆ. ಇದು ನಿಂತ ನೀರಾಗದೆ ಸದಾಕಾಲ ಹರಿಯುವ ನೀರಾಗಿ ದೊಡ್ಡ ಸಾಗರವಾಗಿದ್ದು, ಯಾರಿಂದಲೂ ನಂದಿಸಲು ಸಾಧ್ಯವಿಲ್ಲ. ಆದ್ದರಿಂದ ಮಾನವೀಯತೆ ಒದಗಿಸಿಕೊಡುತ್ತದೆ. ಪ್ರತಿಯೊಬ್ಬ ಪ್ರಜೆಯೂ ಇತಿಹಾಸವನ್ನು ಕಟ್ಟಿ ಬೆಳೆಸಬೇಕು. ಇದರ ಮಹತ್ವವನ್ನು ಎಷ್ಟೇ ಹೇಳಿದರೂ ಸಾಲದು, ಪ್ರಾಣಿ ಪಕ್ಷಿಗಳನ್ನು ನಾವು ಪ್ರೀತಿಸುತ್ತೇವೆ. ಆದರೆ ಮನುಷ್ಯರನ್ನು ಪ್ರೀತಿಸುವುದಿಲ್ಲ. ಕಾರಣ ಆಧುನಿಕ ಜಗತ್ತಿನಲ್ಲಿ ಭಾವನೆಗಳು ನಶಿಸುತ್ತಾ ಹೋಗುತ್ತಿವೆ ಎಂದು ವಿಷಾದಿಸಿದರು.
ನಂತರ ಬಸವರಾಜು ಅವರು ತಾವೇ ಬರೆದ ಭಾರತ ಸ್ವಾತಂತ್ರ್ಯ ಚಳುವಳಿ, ದಕ್ಷಿಣ ಭಾರತದ ಚರಿತ್ರೆ, ಭಾರತದ ಸಂಕ್ಷಿಪ್ತ ಚರಿತ್ರೆ, ಆಧುನಿಕ ಏಷ್ಯಾದ ಚರಿತ್ರೆ ಮತ್ತು ಆಧುನಿಕ ಯೂರೋಪಿನ ಇತಿಹಾಸದ ಪುಸ್ತಕ ಹಾಗೂ ಸುಮಾರು 16 ಸಾವಿರ ಪುಸ್ತಕಗಳನ್ನು ಕಾಲೇಜಿಗೆ ಉಚಿತವಾಗಿ ಕೊಡುಗೆಯಾಗಿ ನೀಡಿದರು.
ಪ್ರಭಾರ ಪ್ರಾಂಶುಪಾಲ ಶಿವಕುಮಾರಸ್ವಾಮಿ, ಉಪನ್ಯಾಸಕ ಎಂ.ಕೆ. ಮೃತ್ಯುಂಜಯ, ಎಂ.ಎಸ್. ಶ್ರೀನಿವಾಸ, ಮಂಜುನಾಥ್, ಇದ್ದರು. ಕಿಶೋರ್ ಸ್ವಾಗತಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.