ಐಟಿಐ ಕಾಲೇಜು ಆರಂಭಕ್ಕೆ ಅಸ್ತು
ಎಚ್.ಡಿ.ಕೋಟೆ: ತಾಲೂಕಿನ ಸರಗೂರಿನಲ್ಲಿ ಐಟಿಐ ಕಾಲೇಜು ತೆರೆಯಲು ಅನುಮತಿ ನೀಡಿದ ಕಾರ್ಮಿಕ ಸಚಿವ ಬಚ್ಚೇಗೌಡ ಅವರಿಗೆ ಶಾಸಕ ಚಿಕ್ಕಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ಪ.ಜಾತಿ, ಪ.ಪಂಗಡ ಮತ್ತು ಗಿರಿಜನರೇ ಹೆಚ್ಚು ವಾಸಿಸುವ ಅತ್ಯಂತ ಹಿಂದುಳಿದ ನಮ್ಮ ತಾಲೂಕಿಗೆ ಐಟಿಐ ಕಾಲೇಜು ಮಂಜೂರು ಮಾಡಬೇಕು ಎಂದು ಶಾಸಕ ಚಿಕ್ಕಣ್ಣ ಅವರು ಕಾರ್ಮಿಕ ಸಚಿವ ಬಚ್ಚೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ತಾಲೂಕಿನಲ್ಲಿ ಹೆಚ್ಚು ಬಡವರಿದ್ದಾರೆ. ಅವರು ತಾಂತ್ರಿಕ ಶಿಕ್ಷಣ ಪಡೆಯಲು ಬೇರೆ ಕಡೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತಹ ಮಕ್ಕಳ ಅನುಕೂಲಕ್ಕಾಗಿ ಐಟಿಐ ಕಾಲೇಜು ತೆರೆಯಲು ಅನುಮತಿ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಬಚ್ಚೇಗೌಡ 2013-14ನೇ ಸಾಲಿನಿಂದ ಸರಗೂರಿನಲ್ಲಿ ಕಾಲೇಜು ತೆರೆಯಲು ಅನುಮತಿ ನೀಡಿದ್ದಾರೆ.
ಅಕ್ಷರಸ್ಥರಾಗಲು ಮಹಿಳೆಯರಿಗೆ ಕರೆ
ಹೊಸೂರು: ಪ್ರತಿಯೊಬ್ಬ ಮಹಿಳೆಯರು ಗ್ರಾಪಂ ಲೋಕ ಶಿಕ್ಷಣ ಕೇಂದ್ರಗಳಲ್ಲಿ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು, ಶಿಕ್ಷಿತರಾಗಿ ಇತರರಿಗೂ ಅಕ್ಷರ ಕಲಿಸುವ ಕಾಯಕ ಮಾಡಬೇಕು ಎಂದು ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ಬಿ.ಎಸ್. ಸುಬ್ಬೇಗೌಡ ಹೇಳಿದರು. ಚುಂಚನಕಟ್ಟೆ ಹೋಬಳಿ ಮಾಯಿಗೌಡನಹಳ್ಳಿ ಗ್ರಾಪಂ ಲೋಕ ಶಿಕ್ಷಣ ಕೇಂದ್ರದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸಂಘಟಿತರಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ. ಸಂಘಟನೆಯ ಮೂಲಕ ವಿವಿಧ ವೃತ್ತಿ ತರಬೇತಿಗಳನ್ನು ಪಡೆದು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮುಖ್ಯ ಶಿಕ್ಷಕ ವಸಂತ ಕುಮಾರ್, ಎಂ.ಬಿ. ಕುಮಾರ್, ಸುಬ್ಬೇಗೌಡ, ಶಂಕರಾಚಾರಿ, ಶಿವಣ್ಣ, ಮಹದೇವಪ್ಪ, ಮಂಜುಳಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.