ಕಲಾವಿದರ ಮಾಸಾಶನ ಹೆಚ್ಚಿಸಲು ಒತ್ತಾಯ
ಕ.ಪ್ರ.ವಾರ್ತೆ ಮೈಸೂರು ಮಾ.19
ನಿವೃತ್ತಿ ಹೊಂದಿರುವ ರಂಗಭೂಮಿ ಕಲಾವಿದರ ಮಾಸಾಶನವನ್ನು ಹೆಚ್ಚಿಸುವುದರ ಜತೆಗೆ ಕಲಾವಿದರ ವಯಸ್ಸನ್ನು 50ಕ್ಕೆ ಇಳಿಸುವಂತೆ ಸುಭಾಷ್ ಯುವಕ ಮಂಡಳಿ ಕಾರ್ಯದರ್ಶಿ ಪಿ. ಗೋವಿಂದರಾಜು ಒತ್ತಾಯಿಸಿದ್ದಾರೆ.
ಈಗ ಸರ್ಕಾರ ನೀಡುತ್ತಿರುವ ಒಂದು ಸಾವಿರ ಗೌರವಧನ ಒಬ್ಬ ಕಲಾವಿದನಿಗೆ ಅರ್ಧ ಹೊಟ್ಟೆ ತುಂಬಿಸಲೂ ಸಾಧ್ಯವಾಗುತ್ತಿಲ್ಲ. ಕಲಾವಿದ ತನ್ನ ಜೀವನದ ಉದ್ದಕ್ಕೂ ಕಲೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಹಣವಿಲ್ಲದೆ, ಅನ್ನವಿಲ್ಲದೆ ಹಾಗೂ ಮಲಗಲು ಸೂರಿಲ್ಲದೇ ನರಳುತ್ತಿದ್ದಾನೆ. ಸಾರ್ವಜನಿಕರಿಂದ ಸನ್ಮಾನ ಗೌರವಗಳಿಗೆ ಮಾತ್ರ ಸೀಮಿತವಾಗಿದ್ದಾನೆ. ಆದರೆ, ಇದೆಲ್ಲಕ್ಕಿಂತಲೂ ಜೀವನವೇ ದೊಡ್ಡದಾಗಿರುವುದರಿಂದ ಜೀವನ ಸಾಗಿಸಲು ಆರ್ಥಿಕತೆಯ ಅವಶ್ಯವಿದೆ.
ಕಲಾವಿದ ಬದುಕಿದ್ದಾಗ ತನ್ನ ಸೇವೆಗೆ ಸರ್ಕಾರ ನೀಡಿದ ಮಾಸಾಶನವನ್ನು ಪಡೆದು ನೆಮ್ಮದಿಯ ನಾಲ್ಕು ದಿನದ ಬದುಕು ಕಾಣುತ್ತಾರೆ. ಆದರೆ, ಅತಂತ್ರ ಸ್ಥಿತಿಯಲ್ಲಿ ಕಲಾವಿದರ ಪರದಾಟ ಅವರ ಗೋಳಿನ ಕಥೆಯನ್ನು ಸರ್ಕಾರ ಒಮ್ಮೆಯಾದರೂ ಕಣ್ಣು ತೆರೆದು ನೋಡಬೇಕು. ಈಗ ನೀಡುತ್ತಿರುವ ಮಾಸಾಶನವನ್ನು 1000 ರು.ನಿಂದ 3000 ರು. ಗೆ ಏರಿಸಬೇಕಾಗಿದೆ. ತಪ್ಪಿದ್ದಲ್ಲಿ ಮೈಸೂರಿನಿಂದ ಪಾದಯಾತ್ರೆ ಮೂಲಕ ಹೋರಾಟವನ್ನು ಹಂತ ಹಂತವಾಗಿ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.