ಕಾರ್ಮಿಕ ಸಂಘಕ್ಕೆ ಸೂಚನೆ
ಮೈಸೂರು: ಕಾರ್ಮಿಕ ಸಂಘಗಳ ಕಾಯ್ದೆ ಅನ್ವಯ ನೋಂದಣಿಯಾಗಿರುವ ಕಾರ್ಮಿಕ ಸಂಘಗಳು ಕಡ್ಡಾಯವಾಗಿ 2013ರ ಏ.30ರೊಳಗೆ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ವಾರ್ಷಿಕ ವರದಿ ಸಲ್ಲಿಸುವಂತೆ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
27ಕ್ಕೆ ವಿವಿ ಶಿಕ್ಷಣ ಮಂಡಳಿ ಸಭೆ
ಮೈಸೂರು: ಮೈಸೂರು ವಿವಿ ಕ್ರಾಫರ್ಡ್ಭವನದ ಸಿಂಡಿಕೇಟ್ ಸಭಾಂಗಣದಲ್ಲಿ ಮಾ.27ರ ಬೆಳಗ್ಗೆ 11ಕ್ಕೆ ಶಿಕ್ಷಣ ಮಂಡಳಿಯ ನಾಲ್ಕನೇ ಸಾಮಾನ್ಯ ಸಭೆಯು ನಡೆಯಲಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ವಿಶ್ವ ರಂಗಭೂಮಿ ದಿನ
ಮೈಸೂರು: ಮಾ.27 ರಂದು ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಸಂಘ ಸಂಸ್ಥೆಗಳು, ರಂಗ ಸಂಕಿರಣಗಳನ್ನು ಸಂವಾದಗಳನ್ನು ಏರ್ಪಡಿಸಿ ಸಾರ್ವಜನಿಕರು, ರಂಗಾಸಕ್ತರು, ರಂಗಸಮುದಾಯದೊಂದಿಗೆ ಮಿಳಿತಗೊಂಡು ಸ್ಥಳೀಯ ಪ್ರಾದೇಶಿಕ ರಂಗಭೂಮಿಯ ಜತೆಗೆ ವಿಶ್ವರಂಗಭೂಮಿಯ ಅರ್ಥವಂತಿಕೆಯನ್ನು ಹೆಚ್ಚಿಸಿ ಜೀವಂತಿಕೆಯನ್ನು ರಂಗನಿರಂತತೆಯನ್ನು ಮೆರೆಯುವಂತಾಗಲಿ ಎಂದು ರಂಗಕರ್ಮಿ ಶ್ರೀಕಂಠ ಗುಂಡಪ್ಪ ಶುಭ ಕೋರಿದ್ದಾರೆ.
ಬೇಸಿಗೆ ಶಿಬಿರ
ಮೈಸೂರು: ಪ್ರೊ-ಟೆಕ್ ಅಸೋಸಿಯೇಷನ್ ವತಿಯಿಂದ ಮಾ.25 ರಿಂದ ಆರು ವಾರಗಳ ಬ್ಯಾಸ್ಕೆಟ್ ಬಾಲ್ ಆಟದ ಬೇಸಿಗೆ ಶಿಬಿರವನ್ನು ಜೆ.ಕೆ. ಮೈದಾನದಲ್ಲಿ ಆರಂಭಿಸಲಿದ್ದು, 8 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಏ.1 ರಿಂದ ಬೆಳಗ್ಗೆ ಸಮಯದಲ್ಲೂ ಶಿಬಿರ ನಡೆಯಲಿದೆ. 9845951971 ಸಂಪರ್ಕಿಸಿರಿ.
ನೇಮಕ
ಮೈಸೂರು: ಕೆಜೆಪಿಯ ಅಲ್ಪಸಂಖ್ಯಾತ ಘಟಕದ ನಗರ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಥಾಮಸ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅನಸೂಯ ಆಚಾರ್, ಜಂಟಿ ಕಾರ್ಯದರ್ಶಿಯಾಗಿ ಗ್ರೇಸ್ ಮೆರಾಜ್ ಅವರನ್ನು ನೇಮಕ ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.