ಡಿಜಿಟಲ್ ಗ್ರಂಥಾಲಯ ಕುರಿತ ದತ್ತಿ ಉಪನ್ಯಾಸ ಮಾಲೆ ಯಶಸ್ವಿ
ಕ.ಪ್ರ.ವಾರ್ತೆ ಮೈಸೂರು ಮಾ.19
ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮಂಗಳವಾರ ಡಿಜಿಟಲ್ ಗ್ರಂಥಾಲಯ ಕುರಿತು ದತ್ತಿ ಉಪನ್ಯಾಸ ಮಾಲೆ ಏರ್ಪಡಿಸಿತ್ತು.
ಅಮೆರಿಕದ ಮೆರಿಲ್ಯಾಂಡ್ ವಿವಿಯ ಡಾ.ಡೊಗ್ಲಾಸ್ ಡಬ್ಲ್ಯೂ. ಓರ್ಡ್ ಅವರು ಬಿಯಾಂಡ್ ದ ಡಾಕ್ಯೂಮೆಂಟ್ ಇನ್ಫಾರ್ಮೇಷನ್ ಅಸೆಸ್ ಫಾರ್ ಕನ್ವರ್ಷನಲ್ ಕಂಟೆಂಟ್ ಕುರಿತು ಉಪನ್ಯಾಸ ನೀಡಿದರು.
ವಿವಿಧ ಸಂಭಾಷಣೆಗಳನ್ನು ಆಲಿಸಿ ವಿಶ್ಲೇಷಿಸುವ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಾವು ತಂತ್ರಜ್ಞಾನದಲ್ಲಿ ಆಗಾಗ್ಗೆ ಬದಲಾವಣೆ ಆಗುತ್ತಿರಬೇಕು. ಇಂದು ಅನೇಕ ವಿಷಯಗಳ ಕುರಿತು ಮಾಹಿತಿ ಕಲೆ ಹಾಕಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ. ಆದರೆ ಬಳಸಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದೇವೆ ಎಂದರು.
ಪ್ರೊ.ಸೈಯದ್ ಅಖಿಲ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಇನ್ಫಾರ್ಮೆಟಿಕ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರೊ.ಕೈಸರ್ ನಿಕಂ ಸ್ವಾಗತಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.