ನಾಳೆ ಡೌನ್ಸ್ ಸಿಂಡ್ರೋಮ್ ದಿನ
ಮೈಸೂರು: ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಘಟಕವು ಮಾ.21ರ ಸಂಜೆ 4.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಐಎಂಎ ಭವನದಲ್ಲಿ ವಿಶ್ವ ಡೌನ್ಸ್ ಸಿಂಡ್ರೋಮ್ ದಿನಾಚರಣೆ ಏರ್ಪಡಿಸಿದ್ದು, ಭ್ರೂಣ ತಜ್ಞ ಡಾ.ಎನ್.ಎಸ್. ಪ್ರವೀಣ್ ರೀಸೆಂಟ್ ಅಡ್ವಾನ್ಸಸ್ ಇನ್ ಡೌನ್ಸ್ ಸಿಂಡ್ರೋಮ್ ಸ್ಕ್ರೀನಿಂಗ್ ಡ್ಯೂರಿಂಗ್ ಪ್ರೆಗ್ನೆನ್ಸಿ ವಿಷಯ ಕುರಿತು ಉಪನ್ಯಾಸ ನೀಡುವರು.
ಮಹಿಳಾ ದಿನ
ಸುವರ್ಣ ಲೇಡಿಸ್ ಕ್ಲಬ್ ವತಿಯಿಂದ ಮಾ.21ರ ಸಂಜೆ 5ಕ್ಕೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸುವರು. ಪ್ರೊ.ಭಾಷ್ಯಂ ಸಾನ್ನಿಧ್ಯ ವಹಿಸಲಿದ್ದು, ಟಿ.ಎನ್. ಮಂಗಳಾ ಸತ್ಯನ್, ಡಾ. ಗೀತಾ ಕೆ. ಅವಧಾನಿ ಅತಿಥಿಯಾಗಿ ಭಾಗವಹಿಸುವರು.
ಕ್ಯಾನ್ಸರ್ ತಪಾಸಣೆ
ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಮಾ.21 ರಂದು ಕ್ಯಾನ್ಸರ್ ತಪಾಸಣೆ ಶಿಬಿರ ಏರ್ಪಡಿಸಲಾಗಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾನ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ತಪಾಸಣೆ ಶಿಬಿರದಲ್ಲಿ ಭಾಗವಹಿಸುವರು. ದೂ. 0821- 4259259 ಸಂಪರ್ಕಿಸಬಹುದು.
ಪ್ರಶಸ್ತಿ ವಿತರಣೆ
ಬೋಗಾದಿಯ ಎರಡನೇ ಹಂತದಲ್ಲಿರುವ ಪದ್ಮ ಕಲಾ ಸಿಂಚನದಲ್ಲಿ ಮಾ.22ರ ಸಂಜೆ 4 ಕ್ಕೆ ಬಹುಮಾನ ವಿತರಣಾ ಸಮಾರಂಭ ಮತ್ತು ಸಂಗೀತ ಕಲಾ ಕೌಸ್ತುಭ ಪ್ರಶಸ್ತಿ ಹಾಗೂ ವಾತ್ಸಲ್ಯ ಚಿಲುಮೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ ಎಂದು ಡಾ. ಸುಕನ್ಯಾ ತಿಳಿಸಿದ್ದಾರೆ.
ನೇಮಕ
ಜೆಡಿಎಸ್ ಹಿಂದುಳಿದ ವರ್ಗದ ಮಹಿಳಾ ವಿಭಾಗದ 27ನೇ ವಾರ್ಡ್ ಅಧ್ಯಕ್ಷರಾಗಿ ಪದ್ಮಾ ನಾಗರಾಜ್, ನಗರ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆಯಾಗಿ ಲತಾ ರಂಗನಾಥ್ ಅವರನ್ನು ನೇಮಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.