ಭೇರ್ಯ ಗ್ರಾಪಂ ಸಭಾ ನಡವಳಿ ಪುಸ್ತಕ ವಶ
ಕ.ಪ್ರ.ವಾರ್ತೆ ್ಣ ಭೇರ್ಯ ್ಣ ಮಾ.19
ಇಲ್ಲಿನ ಗ್ರಾಪಂ ಸಭಾ ನಡವಳಿ ಪುಸ್ತಕ ಮತ್ತು ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಒ ಬಸವರಾಜ್ ಹೇಳಿದರು.
ಹಾಲಿ ಮತ್ತು ಮಾಜಿ ಅಧ್ಯಕ್ಷರು ಬಸವ ವಸತಿ ಯೋಜನೆಯಲ್ಲಿ ಉಳ್ಳವರಿಗೆ ಮನೆ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿ ಎದುರು ಉಪವಾಸ ಧರಣಿ ನಡೆಸಿದರು. ತಾಪಂ ಇಒ ಭೇಟಿ ನೀಡಿ ಗ್ರಾಪಂ ಸದಸ್ಯರ ಮನವೊಲಿಸಲು ಯಶಸ್ವಿಯಾದರು.
ಕಳೆದ ಮೂರು ವರ್ಷಗಳಿಂದ ಇದುವರೆಗೂ ಯಾವ ಯಾವ ಗ್ರಾಮಕ್ಕೆ ಎಷ್ಟು ಮನೆಗಳನ್ನು ನೀಡಲಾಗಿದೆ ಮತ್ತು ಇಂದು ನೀಡಿರುವ 179 ಬಸವ ವಸತಿ ಯೋಜನೆಯ ಮನೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ಹಾಗೂ ಗ್ರಾಪಂ ಲೆಕ್ಕಪತ್ರಗಳನ್ನು ತನಿಖೆ ಮಾಡಲು ಶಿಕ್ಷಣ ಇಲಾಖೆಯ ಬಿಇಒ ಜವರೇಗೌಡ ಅವರನ್ನು ನೇಮಿಸಿ ತನಿಖೆ ಮಾಡಿಸಿ, ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಂದಿನ ಸಮಗ್ರ ಮಾಹಿತಿಯನ್ನು ಜಿಪಂ ಸಿಇಒ ಅವರಿಗೆ ತಿಳಿಸುವುದಾಗಿ ಹೇಳಿದರು.
ತಪ್ಪಿದ್ದರೆ ಪಿಡಿಒ ವಿರುದ್ಧ ಕ್ರಮ: ಗ್ರಾಪಂ ಯಾವುದೇ ಅಧಿಕಾರ ನಡೆಸಲು ಮತ್ತು ತೀರ್ಮಾನ ತೆಗೆದುಕೊಳ್ಳಲು ಸದಸ್ಯರಿಗೆ ಅವಕಾಶವಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮನವಿ ಮಾಡಿದ ಅವರು, ಗ್ರಾಪಂ ಅಧ್ಯಕ್ಷರ ಪತಿಯಾಗಲಿ ಮತ್ತು ಸಂಬಂಧಿಕರಾಗಲಿ ಅಧಿಕಾರ ಮಾಡುವ ಅವಕಾಶವಿಲ್ಲ. ಇಂತಹದ್ದು ಕಂಡುಬಂದರೆ ನನ್ನ ಗಮನಕ್ಕೆ ತಿಳಿಸಿ ಎಂದ ಅವರು, ಪಿಡಿಒ ಅವರದ್ದು ಏನಾದರು ತಪ್ಪು ಕಂಡುಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು. ನಂತರ ಧರಣಿ ಕೈ ಬಿಡಲಾಯಿತು.
ಧರಣಿಯಲ್ಲಿ ಗ್ರಾಪಂ ಸದಸ್ಯರಾದ ಸತೀಶ್, ಬಿ.ಎಚ್. ಮಹದೇವ್, ಬಿ.ಪಿ. ಪ್ರಕಾಶ್, ಸುದರ್ಶನ್, ಕೃಷ್ಣೇಗೌಡ, ಮಹಾದೇವಿ, ರಾಜಮ್ಮ, ನಂಜಾಮಣಿ, ಬಿಲ್ ಕಲೆಕ್ಟರ್ ಕುಮಾರ್, ಅಹಿಂದ ಮುಖಂಡ ಕಾಳೇಗೌಡ, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ಕುಮಾರ್ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.