ರಾಮಾಂಜನೇಯ ಯುದ್ಧ, ಸುಭದ್ರಕಲ್ಯಾಣ ಕೃತಿಗಳ ಲೋಕಾರ್ಪಣೆ
ಕ.ಪ್ರ.ವಾರ್ತೆ ಮೈಸೂರು ಮಾ.19
ಪ್ರಖ್ಯಾತ ನಾಟಕಕಾರ ದಿವಂಗತ ತೋರಣಗಲ್ ರಾಜಾರಾಯರು ರಚಿಸಿರುವ ಸುಭ್ರದ ಕಲ್ಯಾಣ ಹಾಗೂ ರಾಮಾಂಜನೇಯ ಯುದ್ಧ ಎಂಬ ಪೌರಾಣಿಕ ನಾಟಕಗಳ ಕೃತಿಯ ಲೋಕಾರ್ಪಣೆ ಮಂಗಳವಾರ ನಡೆಯಿತು. ಬೆಂಗಳೂರಿನ ರಂಗರತ್ನಾಕರ ಸಂಸ್ಥೆಯ ಹನ್ನೆರಡನೇ ವಾರ್ಷಿಕೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಭದ್ರ ಕಲ್ಯಾಣ ಕೃತಿಯನ್ನು ಕೇಂದ್ರ ನಾಟಕ ಅಕಾಡೆಮಿ ಪುರಸ್ಕೃತ ಆರ್. ಪರಮಶಿವನ್ ಹಾಗೂ ರಾಮಾಂಜನೇಯ ಯುದ್ಧ ಕೃತಿಯನ್ನು ರಂಗತಜ್ಞ ಡಾ.ಎಚ್.ಕೆ. ರಾಮನಾಥ್ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ರಂಗಕಲಾವಿದರಾದ ಬಿ.ಎಸ್. ವಾಸುದೇವರಾಜು, ವಿ. ಕೃಷ್ಣಮೂರ್ತಿ, ಹಾಸನದ ರಂಗಕಲಾವಿದ ಜಿ.ಎಂ. ಕೃಷ್ಣೇಗೌಡ ಹಾಗೂ ಮಂಡ್ಯದ ರಂಗಕಲಾವಿದ ಸಾತನೂರು ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ವಿ.ಎನ್. ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ಕಾರ್ಯದರ್ಶಿ ಎಚ್.ಎಸ್. ಗೋವಿಂದೇಗೌಡ ಪ್ರಾಸ್ತಾವಿಕ ಮಾತನಾಡಿದರು. ನಂತರ ಆರ್. ಪರಮಶಿವನ್ ಹಾಗೂ ರಂಗರತ್ನಾಕರ ತಂಡದವರು ರಂಗಗೀತೆಗಳನ್ನು ಹಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.