ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವರದಕ್ಷಿಣೆ ಕಿರುಕುಳ: ಐವರಿಗೆ 5 ವರ್ಷ ಜೈಲು

Parashurama
Updated On : 19 Mar 2013, 9:49 am

ಕ.ಪ್ರ.ವಾರ್ತೆ ಮೈಸೂರು ಮಾ.19
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಗಂಡ ಮತ್ತು ಆತನ ಕುಟುಂಬದ ನಾಲ್ವರಿಗೆ ನ್ಯಾಯಾಲಯವು ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟಾರೆ 1.20 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಮಂಡಿ ಮೊಹಲ್ಲಾ ಈದ್ಗಾ ಶಾಲಿಮಾರ್ ವೃತ್ತದ ಬಳಿಯ ನಿವಾಸಿ ಜಾಫರ್ ಷರೀಫ್, ಆತನ ತಾಯಿ ಶಹನವಾಸ್, ತಂದೆ ಕೆ. ಹೈದರ್ ಸಾಬ್, ಸಹೋದರಿ ಫರನಾ, ಸಹೋದರಿಯ ಪತಿ ಸಮಿವುಲ್ಲಾ ಎಂಬವರೆ ಶಿಕ್ಷೆಗೆ ಗುರಿಯಾದವರು. ಐಷಾಸಿದ್ದಿಕಾ ಬಾನು ಕಿರುಕುಳಕ್ಕೆ ಒಳಗಾದವರು.
ಪ್ರಕರಣದ ವಿವರ: ಜಾಫರ್ ಷರೀಫ್ ಮತ್ತು ಐಷಾ ಸಿದ್ದಿಕಾ ಬಾನು ಅವರ ವಿವಾಹವು 2007 ರಲ್ಲಿ ನಡೆದಿತ್ತು. ವಿವಾಹ ವೇಳೆ 1 ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದರು. ಮದುವೆಯ ನಂತರ ಜಾಫರ್ ಮತ್ತು ಕುಟುಂಬದವರು ಸಣ್ಣಪುಟ್ಟ ವಿಚಾರಕ್ಕೆ ಐಷಾ ಅವರನ್ನು ಬೈಯುತ್ತಿದ್ದರು. ಮಗುವಿನ ಮೇಲೆ ಪೆಟ್ರೋಲ್ ಸುರಿದು ಸಾಯಿಸುವುದಾಗಿ ಹೆದರಿಸುತ್ತಿದ್ದರು.
ಮತ್ತೆ 2 ಲಕ್ಷ ವರದಕ್ಷಿಣೆ ತರುವಂತೆ ಹಿಂಸೆ ನೀಡಿದ್ದರು ಎಂದು ಐಷಾಸಿದ್ದಿಕಾ ಬಾನು ಅವರು ಮೈಸೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 4ನೇ ಹೆಚ್ಚುವರಿ (ಹಿರಿಯ ಶ್ರೇಣಿ) ಮತ್ತು ಸಿಜೆಎಂ ನ್ಯಾಯಾಧೀಶ ಸಾಬಪ್ಪ ಬಿ. ಮೇಲಗಲ್ ಅವರು ಐದು ಮಂದಿ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿ ಎಂದು ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟು 1.20 ಲಕ್ಷ ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್. ಶಿವಕುಮಾರ್ ವಾದಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments