ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಹಿರಿಯ ಕಲಾವಿದರಿಗೆ ಸನ್ಮಾನ

Parashurama
Updated On : 21 Mar 2013, 11:07 am

ಮೈಸೂರು: ಸ್ನೇಹ ಸ್ಪಂದನ ಮಹಿಳಾ ಮಂಡಳಿ ಹಾಗೂ ವಿಷ್ಣು ಜನ ಸೇವಾ ಸಮಿತಿ ಸಂಯುಕ್ತವಾಗಿ ಮಹಿಳಾ ದಿನಾಚರಣೆ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭವನ್ನು ಮಾ. 22ರ ಸಂಜೆ 5.30ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದೆ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಉದ್ಘಾಟಿಸುವರು. ಡಿಸಿಪಿ ಬಸವರಾಜ ವೈ. ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ ಅತಿಥಿಗಳಾಗುವರು ಎಂದು ಮಂಡಳಿಯ ಅಧ್ಯಕ್ಷೆ ವಿಜಯಾ ರಾಧಾಕೃಷ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿರಿಯ ಕಲಾವಿದರಾದ ನಂದಿನಿ ಈಶ್ವರ್, ಬಿ.ಎಚ್. ನಾಗರತ್ನ, ಕೃಷ್ಣವೇಣಿ ಪ್ರಸಾದ್, ಸಿ.ಎಸ್. ನಾಗರತ್ನ ಮತ್ತು ಕೃಪಾ ಫಡ್ಕೆ ಅವರನ್ನು ಸನ್ಮಾನಿಸಲಾಗುವುದು. ನಂತರ ಮದಗದ ಕೆಂಚವ್ವ ಎಂಬ ಜನಪದ ನೃತ್ಯರೂಪಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ಮಂಡಳಿಯ ಕಾರ್ಯದರ್ಶಿ ಜ್ಯೋತಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಪ್ರತಿಭಾ ಗುರುರಾಜ್, ಮಂಗಳಾ ಇದ್ದರು.
ಭೂಸ್ವಾಧೀನ ಕೈಬಿಡಲು ಮನವಿ
ಮೈಸೂರು: ದಿವ್ಯ ದೀಪ ಚಾರಿಟಬಲ್ ಟ್ರಸ್ಟ್ ಮೈಸೂರು ತಾಲೂಕಿನ ಕೆಂಚಲಗೂಡು ಗ್ರಾಮದಲ್ಲಿ ನಡೆಸುತ್ತಿರುವ ಕಲಿಯುವ ಮನೆಗೆ (ಪರ್ಯಾಯ ಶಾಲೆ) ಸೇರಿದ ಜಾಗವನ್ನು ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲುವ ಪ್ರಕ್ರಿಯೆ ಕೂಡಲೆ ನಿಲ್ಲಿಸಬೇಕು ಎಂದು ವ್ಯವಸ್ಥಾಪಕ ಟ್ರಸ್ಟಿ ಎಂ.ಆರ್. ಅನಂತ್‌ಕುಮಾರ್ ಮನವಿ ಮಾಡಿದರು. ಕೆಂಚಲಗೂಡಿನಲ್ಲಿ ಶಾಲೆಗೆ ಸೇರಿದ 2.33 ಎಕರೆ ಜಮೀನಿದೆ. ಈ ಗ್ರಾಮದ ಸುತ್ತಮುತ್ತ 160 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಗೃಹ ಮಂಡಳಿ ಉದ್ದೇಶಿಸಿದ್ದು, ಇದರಲ್ಲಿ ನಮ್ಮ ಶಾಲೆಗೆ ಸೇರಿದ 1.6 ಎಕರೆ ಜಮೀನೂ ಸೇರಿದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಾಪು ಸತ್ಯನಾರಾಯಣ, ರಕ್ಷಿತ್, ಶ್ರೀಕಂಠ ಗುಂಡಪ್ಪ, ಶೈಲಜಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments