ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಪ್ಪಡಿ ಕ್ಷೇತ್ರದಲ್ಲಿ ತಂಗುದಾಣ ನಿರ್ಮಾಣ

Parashurama
Updated On : 21 Mar 2013, 11:20 am

ಕ.ಪ್ರ.ವಾರ್ತೆ ್ಣ ಕೆ.ಆರ್. ನಗರ ್ಣ ಮಾ.21
ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾದ ಕಪ್ಪಡಿ ರಾಚಪ್ಪಾಜಿ ಅವರ ವಾರ್ಷಿಕ ಜಾತ್ರೆಯ ಪ್ರಮುಖ ಘಟ್ಟವಾದ ಮಹಾಮಾದಲಿ ಸೇವೆ ಏ. 6ರಂದು ನಡೆಯಲಿದೆ ಎಂದು ಮಠದ ಆಡಳಿತಾಧಿಕಾರಿ ಪ್ರಭುರಾಜೇಅರಸ್ ಹೇಳಿದರು.
ಜಾನಪದ ಹಾಡುಗಾರರಾದ ಸಿದ್ದಪ್ಪಾಜಿ ಅವರ ಶಿಷ್ಯರಾಗಿದ್ದ ರಾಚಪ್ಪಾಜಿ ಅವರು ಉತ್ತರದ ಐದು ನದಿ ದಾಟಿಕೊಂಡು ದಕ್ಷಿಣದ ಕಪ್ಪಡಿ ಶ್ರೀಕ್ಷೇತ್ರಕ್ಕೆ ಬಂದು ಹಲವು ಪವಾಡ ಮಾಡಿ, ಸಮಾಜದ ಸುಧಾರಣೆಗೆ ಶ್ರಮಿಸಿ ಅಹಂಕಾರ ಮೆರೆಯುವವರನ್ನು ಪರಿವರ್ತಿಸುತ್ತಿದ್ದ ಪವಾಡ ಪುರುಷರಾಗಿದ್ದರು ಎಂದು ಅವರು ಗುರುವಾರ ಮಠದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಚಪ್ಪಜಿ ಅವರು ಜಾತ್ಯತೀತ ಪರಂಪರೆಯ ವ್ಯಕ್ತಿಯಾಗಿದ್ದು, ಸಮಾಜವನ್ನು ವಿಭಿನ್ನ ಪರಂಪರೆಯತ್ತ ಕೊಂಡೊಯ್ಯುವ ಮಹಾನ್ ಪುರುಷರಾಗಿದ್ದರು. ಇಲ್ಲಿ ವಾರ್ಷಿಕ ಜಾತ್ರೆಯು ಮಹಾ ಶಿವರಾತ್ರಿಯಂದು ಆರಂಭವಾಗಿ 25 ದಿನಗಳ ಕಾಲ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ರಾಚಪ್ಪಾಜಿ ಅವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ, ಇಲ್ಲಿಯೆ ತಂಗಿದ್ದು ಹರಕೆ ತೀರಿಸಲಿದ್ದಾರೆ ಎಂದು ಹೇಳಿದರು.
ಏ. 7ರಂದು ಗದ್ದುಗೆ ತೊಳೆದು ಕೊನೆಯ ಮಹಾಮಂಗಳಾರತಿ ಮಾಡಲಿದ್ದು, ಅಂದು ಜಾತ್ರೆಯು ಕೊನೆಗೊಳ್ಳುತ್ತದೆ. ಈ ಬಾರಿ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 5 ಲಕ್ಷ ವೆಚ್ಚದಲ್ಲಿ ಎರಡು ಶೆಲ್ಟರ್ ನಿರ್ಮಿಸಿದ್ದು, ಮೂರು ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸ್ವಾಗತ ಕಮಾನು ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಕಪ್ಪಡಿ ಕ್ಷೇತ್ರದ ಜಾತ್ರೆಗೆ ಈ ಹಿಂದಿನಂತೆ ತಾ. ಆಡಳಿತ ಸಮರ್ಪಕವಾಗಿ ಸಹಕಾರ ನೀಡುತ್ತಿಲ್ಲ. ನಾವೇ ಮಠ, ಭಕ್ತಾದಿಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಸಾಧ್ಯವಾದಷ್ಟು ಮೂಲ ಸವಲತ್ತು ಕಲ್ಪಿಸಿದ್ದು, ಜಾತ್ರೆಗೆ ಬರುವ ಭಕ್ತಾದಿಗಳು ಸ್ವಚ್ಛತೆ ಕಾಪಾಡಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಶಾಲಾ ಕಟ್ಟಡ ಮತ್ತು ಅತ್ಯಂತ ಹಿಂದುಳಿದ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಕಾಮಗಾರಿಗೆ ಆರ್ಥಿಕ ಸಹಕಾರ ನೀಡಲಾಗುತ್ತದೆ. ಇದಕ್ಕೆ ಎಲ್ಲರ ಸಲಹೆ ಸಹಕಾರಬೇಕು ಎಂದು ಕೋರಿದರು.
ವರುಣ್ ಲಿಂಗರಾಜೇ ಅರಸ್, ಶಿವಾಜಿ ಗಣೇಶನ್, ಹೆಬ್ಬಾಳ್ ರಮೇಶ್, ಹರೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments