ಜೆಡಿಎಸ್ ತೊರೆದು ಕೆಜೆಪಿ ಸೇರಿದ ಬಸಂತ್
ಕ.ಪ್ರ ವಾರ್ತೆ ್ಣ ಕೆ.ಆರ್. ನಗರ ್ಣ ಮಾ.21
ಶಾಸಕ ಸಾ.ರಾ. ಮಹೇಶ್ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಜೆಡಿಎಸ್ ತೊರೆದು ಕೆಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಮಾಜಿ ಸಚಿವ ಎಸ್. ನಂಜಪ್ಪನವರ ಪುತ್ರ ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.
ಕೆಜೆಪಿಗೆ ಆಹ್ವಾನಿಸಲು ತಮ್ಮ ನಿವಾಸಕ್ಕೆ ಗುರುವಾರ ಆಗಮಿಸಿದ ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಎಚ್. ಪಿ. ಗೋಪಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎನ್. ಪುಟ್ಟಬುದ್ದಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ತಾ. ಅಧ್ಯಕ್ಷ ಜಗದೀಶ್ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಾ.ರಾ. ಮಹೇಶ್ ಇದೊಂದು ಬಾರಿ ಮಾತ್ರ ಸ್ಪರ್ಧಿಸುತ್ತೇನೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ಆದರೆ, ಈ ಬಾರಿಯು ಅವರೆ ಅಭ್ಯರ್ಥಿಯಾಗುತ್ತಿದ್ದು, ನನಗೆ ಸ್ಪರ್ಧೆಗೆ ಅವಕಾಶ ನೀಡದೆ ಮಾತಿಗೆ ತಪ್ಪಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಜೆಡಿಎಸ್ನಿಂದ ಆಕಾಂಕ್ಷಿಯಾಗಿ ಪಕ್ಷದ ಟಿಕೆಟ್ ಕೇಳಿದ್ದೆವು, ಆದರೂ ನಮಗೆ ಅವಕಾಶ ಮಾಡಿಕೊಡದೆ ಸಾ.ರಾ. ಮಹೇಶ್ ಮತ್ತು ಜೆಡಿಎಸ್ನವರು ಮಾತಿಗೆ ತಪ್ಪಿದ್ದಾರೆ ಎಂದು ಅವರು ಟೀಕಿಸಿದರು.
ಪಕ್ಷದವರು ಕೊಟ್ಟ ಮಾತಿಗೆ ತಪ್ಪಿರುವುದರಿಂದ ರಾಜಕಾರಣದ ಕುಟುಂಬದಿಂದ ಬಂದ ನಾನು, ರಾಜಕೀಯದಲ್ಲಿ ಮುಂದುವರಿಯುವ ಸಲುವಾಗಿ ಜನಸೇವೆ ಮಾಡಲು ರಾಜಕೀಯ ಪಕ್ಷದ ಆಸರೆ ಮತ್ತು ವೇದಿಕೆ ಬೇಕಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಹಾಗೂ ಕೆಜೆಪಿಯ ಧ್ಯೇಯ, ಧೋರಣೆ, ಸಮಾಜಮುಖಿ ಕಾರ್ಯ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಅವರು ಹೇಳಿದರು.
'ಸಾ.ರಾ. ಸಾಮ್ರಾಜ್ಯ': ಕಳೆದ 50 ವರ್ಷಗಳ ರಾಜಕಾರಣದಲ್ಲಿ ಎಂದೂ ಪಕ್ಷಾಂತರ ಮಾಡದ ನಮ್ಮ ಕುಟುಂಬ ಇದೆ. ಮೊದಲ ಬಾರಿಗೆ ಪಕ್ಷಾಂತರ ಮಾಡುತ್ತಿದ್ದು, ನಮ್ಮ ತಂದೆ ಎಸ್. ನಂಜಪ್ಪ ಅವರು ಸ್ವಂತ ದುಡಿಮೆಯಿಂದ ಕಷ್ಟಪಟ್ಟು ತಾಲೂಕಿನಲ್ಲಿ ಜನತಾ ಸಾಮ್ರಾಜ್ಯ ಕಟ್ಟಿದ್ದರು. ಆದರೆ, ಸಾ.ರಾ. ಮಹೇಶ್ ಜೆಡಿಎಸ್ಗೆ ಬಂದ ನಂತರ ಸಾ.ರಾ. ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ. ಇವರ ದುಡ್ಡಿನ ರಾಜಕಾರಣದಿಂದ ಬೇಸತ್ತು ಜೆಡಿಎಸ್ ತೊರೆಯುತ್ತಿದ್ದೇನೆ ಎಂದು ಅವರು ಪ್ರಕಟಿಸಿದರು.
ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎನ್. ಪುಟ್ಟಬುದ್ದಿ ಮಾತನಾಡಿ, ಮಾಜಿ ಸಚಿವ ಎಸ್. ನಂಜಪ್ಪ ಅವರು ತಮ್ಮ ಪುತ್ರರ ಸಮೇತ ಕೆಜೆಪಿ ಬೆಂಬಲಿಸುತ್ತಿರುವುದು ಪಕ್ಷಕ್ಕೆ ಜಿಲ್ಲೆಯಲ್ಲಿ ದೊಡ್ಡ ಶಕ್ತಿ ಬಂದಿದ್ದು, ತಿಂಗಳ ಕೊನೆಯಲ್ಲಿ ಕೆ.ಆರ್. ನಗರದಲ್ಲಿ ಕೆಜೆಪಿಯ ಬೃಹತ್ ಸಮಾವೇಶ ನಡೆಸಿ, ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕೆ.ಎನ್. ಬಸಂತ್ ಮತ್ತು ಅವರ ಬೆಂಬಲಿಗರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.