ಕಾಡಿನಿಂದ ನಾಡಿಗೆ ಬಂದ ಆನೆಗಳು
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಾಡೇನಹಳ್ಳಿ ಬಳಿ ಮೂರು ಆನೆಗಳು ಗೋಚರಿಸಿದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು.
ಮಾನವನ ದುರಾಸೆಯಿಂದಾಗಿ ಕಾಡೆಲ್ಲಾ ನಾಡಾದ ಪರಿಣಾಮ, ಕಾಡಿನಲ್ಲಿ ವಾಸಿಸಬೇಕಾದ ಜೀವಿಗಳೆಲ್ಲಾ ನಾಡಿಗೆ ಬರುವಂತಾಗಿದೆ. ಪರಿಣಾಮ ಶನಿವಾರ ಬೆಳಿಗ್ಗೆ ಮೂರು ಗಂಡಾನೆಗಳು ಪಟ್ಟಣದ ಸಮೀಪವಿರುವ ಕಾಡೇನಹಳ್ಳಿ ಬಳಿ ಗೋಚರಿಸಿವೆ. ಅರಣ್ಯ ಇಲಾಖೆಯವರ ಹೇಳಿಕೆ ಪ್ರಕಾರ ಮೂರು ಆನೆಗಳು ಬನ್ನೇರುಘಟ್ಟ ಕಾಡಿನಿಂದ ತಪ್ಪಸಿಕೊಂಡು ಬಂದಿದ್ದು, ನೆಲಮಂಗಲ ಮಾರ್ಗವಾಗಿ ತುಮಕೂರು ಗುಬ್ಬಿ, ತಾಲೂಕಿನ ಗಂಟೇನಹಳ್ಳಿ ಮಾರ್ಗವಾಗಿ ಕಾಡೇನಹಳ್ಳಿ ಬಳಿಗೆ ಬಂದಿವೆ ಎಂದು ಹೇಳಿದರು. ಅರಣ್ಯ ಇಲಾಖೆ ಎಸಿಎಫ್, ಬಿ.ಎಸ್.ನಾಗೇಂದ್ರರಾವ್, ತಿಪಟೂರು ಆರ್ಎಫ್ಓ ಸತ್ಯನಾರಾಯಣರಾವ್, ಚಿ.ನಾ.ಹಳ್ಳಿ ಆರ್ಎಫ್ಓ ಮಾರುತಿ ಮತ್ತು ಇಲಾಖೆ ಸಿಬ್ಬಂದಿ ಆನೆಗಳನ್ನು ತೀರ್ಥಪುರ ಕಾಡಿನ ಕಡೆಗೆ ಸಾಗುಹಾಕುವಲ್ಲಿ ಯಶಸ್ವಿಯಾದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.