60ಕ್ಕೆ ಕಾಲಿಟ್ಟ ಮಾಜಿ ಮೇಯರ್ ವಾಸು
ಕ.ಪ್ರ.ವಾರ್ತೆ ಮೈಸೂರು ಮಾ.25
ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ವಾಸು ಅವರ 60ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧ ಸೇವಾ ಕಾರ್ಯ ನಡೆಸುವ ಮೂಲಕ ಸೋಮವಾರ ಆಚರಿಸಿದರು.
ಮುಖ್ಯ ಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ಜಯಲಕ್ಷ್ಮೀಪುರಂನ ಚಂದ್ರಕಲಾ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಹಿರಿಯ ಸಾಹಿತಿ ಪ್ರೊ. ದೇಜಗೌ ಉದ್ಘಾಟಿಸಿದರು.
ಸಾಹಿತಿ ಡಾ. ಸಿಪಿಕೆ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ನಿವೃತ್ತ ಡಿಎಫ್ಒ ಎಂ. ಬಿ. ಶ್ರೀನಿವಾಸ್, ನಿವೃತ್ತ ಆರ್ಟಿಒ ಅರಸು, ಅಕಾಡೆಮಿ ಅಧ್ಯಕ್ಷ ಎಂ.ಎನ್. ವಿಜಯ ವೆಂಕಟೇಶ್, ಉಪಾಧ್ಯಕ್ಷೆ ಡಾ. ಅನುಸೂಯ ಕೆಂಪನಹಳ್ಳಿ, ಕಾರ್ಯದರ್ಶಿ ಜಿ.ಪಿ. ಸಿದ್ದೇಗೌಡ, ಮುಖಂಡರಾದ ಪಡವಾರಹಳ್ಳಿ ಮಂಜುನಾಥ್, ಮರಿಲಿಂಗ ಮುಂತಾದವರಿದ್ದರು.
ಗೋಕುಲಂ ಯುವಕರ ಸಂಘವು ಇಎಸ್ಐ ಆಸ್ಪತ್ರೆ ಹಿಂಭಾಗದಲ್ಲಿರುವ ಬಾಪೂಜಿ ವೃದ್ಧಾಶ್ರಕ್ಕೆ ತೆರಳಿ ಸಿಹಿ ಹಂಚಿ ಎಲ್ಲರಿಗೂ ಭೋಜನ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಗೌರಾವಾಧ್ಯಕ್ಷ ನಾಗರಾಜು, ಅಧ್ಯಕ್ಷ ಜೆ.ಎಲ್. ಕಾಂತರಾಜು, ಉಪಾಧ್ಯಕ್ಷರಾದ ಕೆ.ಎಂ. ದಿನೇಶ್, ಸೋಮಶೇಖರ್ ಹಾಗೂ ಎಸ್. ರವಿಶಂಕರ್, ಪ್ರಧಾನ ಕಾರ್ಯದರ್ಶಿ ಎನ್. ಸತೀಶ್, ಖಜಾಂಚಿ ಆರ್. ರಂಗಸ್ವಾಮಿ ಮತ್ತಿತರರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನೀ. ಗಿರಿಗೌಡ, ಎಂ. ಬಿ. ವಿಶ್ವನಾಥ್ ಇತರರು ಶುಭ ಕೋರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.