ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು
ಕ.ಪ್ರ.ವಾರ್ತೆ ್ಣ ಪಿರಿಯಾಪಟ್ಟಣ ್ಣ ಮಾ.25 ಅನಾರೋಗ್ಯದಿಂದ ಹೆಣ್ಣಾನೆಯು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದೆ.
ತಾಲೂಕಿನ ದೊಡ್ಡ ಹೊಸೂರು ಮೀಸಲು ಅರಣ್ಯ ಪ್ರದೇಶ ಸಿಪಿಟಿ-1ರ ವ್ಯಾಪ್ತಿಯಲ್ಲಿ ಆಯರಬೀಡು ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ 40 ವರ್ಷದ ಹೆಣ್ಣಾನೆಯೊಂದು ಅಸ್ವಸ್ಥ ರೀತಿಯಲ್ಲಿ ಭಾನುವಾರ ಸಂಜೆ ಕಂಡು ಬಂದಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿನ್ನಪ್ಪ, ವನ್ಯಜೀವಿ ಪಶುವೈದ್ಯ ಉಮಾಶಂಕರ್ ಆನೆಯನ್ನು ಇಲಾಖೆಯ ವಶಕ್ಕೆ ಪಡೆದು ಚಿಕಿತ್ಸೆ ನೀಡಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಆನೆ ಕೊನೆಯುಸಿರೆಳೆದಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿ ಡಾ. ಉಮಾಶಂಕರ್, ಅತಿಸಾರ ಭೇದಿ ಪ್ರಾರಂಭವಾಗಿ ಆನೆ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತ ಆನೆಗೆ 6 ತಿಂಗಳ ಮರಿ ಇದೆ ಎಂದು ವಲಯ ಅರಣ್ಯಾಧಿಕಾರಿ ಚಿನ್ನಪ್ಪ ತಿಳಿಸಿದಾರೆ.
ಆನೆಯ ಅಂತ್ಯಕ್ರಿಯೆ ಅರಣ್ಯದೊಳಗೆ ನಡೆಸಲಾಯಿತು. ಡಿಎಫ್ಒ ಎನ್.ಟಿ. ವಿಜಯ್ಕುಮಾರ್, ಎಸಿಎಫ್ ಪ್ರಸನ್ನಕುಮಾರ್, ಡಿಆರ್ಎಫ್ಗಳಾದ ಅರ್ಜುನ್, ನಂಜಪ್ಪ, ಸಿಬ್ಬಂದಿ ಗಣೇಶ್, ಮುತ್ತಪ್ಪ, ಕೃಷ್ಣಾ, ನಿಸಾರ್, ಮಹದೇವ್, ಪರಮೇಶ್ ಭೇಟಿ ನೀಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.