'ಜೀವನ ಪರೀಕ್ಷೆ ಎದುರಿಸಲು ಸಜ್ಜಾಗಿ'
ಕ.ಪ್ರ. ವಾರ್ತೆ ಸುತ್ತೂರು ಮಾ.25
ವಾರ್ಷಿಕ ಪರೀಕ್ಷೆಗಳಷ್ಟೆ ಅಲ್ಲದೆ ಜೀವನದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಮರ್ಥರಾಗಬೇಕು ಎಂದು ಜೆಎಸ್ಎಸ್ ಸಂಸ್ಥೆ ಆಡಳಿತಾಧಿಕಾರಿ ಶೇಖರ್ ಪಾಟೀಲ್ ಸಲಹೆ ನೀಡಿದರು.
ಇಲ್ಲಿನ ಶಾಲಾ ವಾರ್ಷಿಕ ಸಂಚಿಕೆ ಸುತ್ತೂರು ಸಿರಿಯನ್ನು ಬಿಡುಗಡೆ ಮಾಡಿ ಮಾತನಾಡಿ, ವ್ಯಕ್ತಿತ್ವಕ್ಕೆ ಘನತೆ ಗೌರವ ಬರುವುದು ಮನುಷ್ಯತ್ವ ಉಳಿಸಿ ಬೆಳೆಸಿಕೊಂಡಾಗ ಎಂದು ಹೇಳಿದರು.
ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು, ಸಹ ಸಂಯೋಜನಾಧಿಕಾರಿ ವೀರಭದ್ರಯ್ಯ, ಡಿ.ಇಡಿ ಪ್ರಾಂಶುಪಾಲ ಡಿ.ಎನ್. ಬಸವರಾಜು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಶಿವಮಲ್ಲು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಸಿದ್ದಪ್ಪ ಮಾತನಾಡಿದರು.
ಸಹಶಿಕ್ಷಕರಾದ ಕೆ.ಬಿ. ಶಿವಾನಂದ್ ಸ್ವಾಗತಿಸಿದರು. ಸಿ. ನಾಗೇಂದ್ರ ವಂದಿಸಿದರು. ಎಂ. ಲೋಕೇಶ್ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.