ನೀರು, ನೈರ್ಮಲ್ಯಕ್ಕೆ ಆದ್ಯತೆ ನೀಡಲಿ
ವಿವಿಧ ಉದ್ಯಾನಗಳ ನಿರ್ವಹಣೆಗೆ ಮೊದಲ ಆದ್ಯತೆ. ಮಳೆ ಇಲ್ಲದಿರುವುದರಿಂದ ಹಾಗೂ ಕಾವೇರಿ ನೀರಿನ ಪೂರೈಕೆ ಸಮಸ್ಯೆಯಿಂದಾಗಿ ಹಸಿರಾಗಿಲ್ಲ. ಮೊದಲ ಅಂತಸ್ತಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಕುಡಿಯುವ ನೀರು ಸಂಗ್ರಹಕ್ಕೆ ತೊಂದರೆಯಾಗಿದೆ. ಒಂದೆರಡು ರಸ್ತೆ ಹೊರತುಪಡಿಸಿದರೆ ಎಲ್ಲಾ ರಸ್ತೆಗಳು ಉತ್ತಮವಾಗಿದೆ. ಸ್ವಚ್ಛತೆಗೆ ಮೊದಲಿನಿಂದಲೂ ಗಮನ ಹರಿಸಿದ್ದೇನೆ.
ಕೆಂಪೇಗೌಡ ಪಾರ್ಕ್ ಬಳಿ ಕಾಮಗಾರಿ ನಡೆದಿರುವ ಕಾರಣ ಅದು ಹಾಳಾಗಿದೆ. ಇನ್ನು 20 ದಿನಗಳಲ್ಲಿ ಆ ಕೆಲಸ ಮುಗಿಯಲಿದೆ.
ವಾರ್ಡ್ ವ್ಯಾಪ್ತಿ: ಗೋಕುಲಂ, ಕುಂಬಾರು ಕೊಪ್ಪಲು ದಕ್ಷಿಣ ಭಾಗ, ಸ್ಯಾನಿಟೋರಿಯಂ ಆಸ್ಪತ್ರೆ, ಕೆಆರ್ಎಸ್ ರಸ್ತೆ, ಹಸುಕರು ಪಾರ್ಕ್, ಗೋಕುಲಂ ಮುಖ್ಯರಸ್ತೆ, ವಿ.ವಿ. ಪುರಂ ಪೊಲೀಸ್ ಠಾಣೆ, ಗೋಕುಲಂ ಸ್ಮಶಾನ, ಕಾಂಟೂರ್ ರಸ್ತೆ.
ರಸ್ತೆಗಳು ಸಾಕಷ್ಟು ಉತ್ತಮವಾಗಿದೆ. ಅಗತ್ಯವಾದ ಎಲ್ ಆಕಾರದ ಮೋರಿ ನಿರ್ಮಾಣಕ್ಕೆ ಆದ್ಯತೆ ವಹಿಸುವೆ. ಸುಮಾರು 1 ಕೋಟಿ ಕಾಮಗಾರಿ ಬಾಕಿಯಿದ್ದು, ಅದನ್ನು ನಿರ್ವಹಿಸಲಾಗುವುದು.
ಸಮರ್ಪಕ ನೀರು ಸರಬರಾಜಿಗೆ ಜಸ್ಕೋ ಕಾಮಗಾರಿ ನಡೆದಿದೆ.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಿವಾಸಿಗಳ ನೀರಿನ ತೊಂದರೆ ಪರಿಹರಿಸಲು 4 ಬೋರ್ವೆಲ್ ತೆಗೆಸಲಾಗುವುದು. ಮತದಾರರ ಮೂಲ ಸೌಕರ್ಯಗಳಿಗೆ ಶ್ರಮಿಸುವೆ.
ವಾರ್ಡ್ ವ್ಯಾಪ್ತಿ: ಒಂಟಿಕೊಪ್ಪಲು, ಗೋಕುಲಂ ಸ್ಮಶಾನ, ವಿ.ವಿ ಪುರಂ, ಬಿ.ಸಿ. ಲಿಂಗಯ್ಯ ವೃತ್ತ, ಚೆಲುವಾಂಬ ಪಾರ್ಕ್, ತರಾಸು ವೃತ್ತ, ಕಾಳಿದಾಸ ರಸ್ತೆ, ವಾಲ್ಮೀಕಿ ರಸ್ತೆ, ಆದಿಪಂಪ ರಸ್ತೆ, ಕನ್ನಡ ಸಾಹಿತ್ಯ ಭವನ, ವಿದ್ಯಾವರ್ಧಕ ವೃತ್ತ.
ನನ್ನ ವಾರ್ಡ್ ವ್ಯಾಪ್ತಿಯ ಪ್ರದೇಶ ತೀರಾ ಹಳೆಯ ಬಡಾವಣೆಯಾಗಿದ್ದು, ಇಲ್ಲಿ ಒಳಚರಂಡಿ ಸಮಸ್ಯೆ ತೀವ್ರವಾಗಿದೆ.
ಆದ್ದರಿಂದ ಇದರ ನಿರ್ವಹಣೆಗೆ ಆದ್ಯತೆ. ಇನ್ನು ಗೃಹಭಾಗ್ಯ ಸೇರಿದಂತೆ ನಗರ ಪಾಲಿಕೆಯ ಸವಲತ್ತುಗನ್ನು ಅರ್ಹ ಬಡವರಿಗೆ ತಲುಪಿಸಲು ಶ್ರಮಿಸುವೆ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರ ವೇತನ ಕೊಡಿಸಲು ನೆರವಾಗಬೇಕು. ಪಡುವಾರಹಳ್ಳಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಹಾಗೂ ಮತದಾರರ ನೀರಿಕ್ಷೆ ಮೀರಿ ಸೇವೆ ಸಲ್ಲಿಸುವ ಹಂಬಲವಿದೆ.
ವಾರ್ಡ್ ವ್ಯಾಪ್ತಿ: ಪಡುವಾರಹಳ್ಳಿ, ಮಾತೃ ಮಂಡಳಿ ವೃತ್ತ, ಆದಿಪಂಪ ರಸ್ತೆ, ವಾಲ್ಮೀಕಿ ರಸ್ತೆ , ಹುಣಸೂರು ರಸ್ತೆ ಮಾರ್ಗವಾಗಿ ನೀಲಗಿರಿಸ್ ವೃತ್ತ, ಪಡುವಾರಹಳ್ಳಿ 6ನೇ ಮುಖ್ಯ ರಸ್ತೆ, ಈಶ್ವರ ದೇವಸ್ಥಾನ.
ಈ ವಾರ್ಡ್ ವ್ಯಾಪ್ತಿಯಲ್ಲಿ ಸಮಾರು 12ಕ್ಕೂ ಹೆಚ್ಚು ಕೊಳಗೇರಿಗಳಿವೆ. ಅಲ್ಲಿನ ನಿಜವಾದ ಫಲಾನುಭವಿಗಳಿಗೆ ನರ್ಮ್ ಯೋಜನೆ ಮನೆ ದೊರಕದ ಇನ್ನು ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಸತಿ ಕಲ್ಪಿಸುವುದು ಮೊದಲ ಆದ್ಯತೆ. ಅವರ ಮಕ್ಕಳಿಗೆ ಶಿಕ್ಷಣ ಕಲ್ಪಿಸಲಾಗುವುದು. ಯಾದವಗಿರಿಯಿಂದ ಹಿಡಿದು ಮೇದರಕೇರಿಯವರೆಗೆ ಒಳಚರಂಡಿ ಅದ್ವಾನವಾಗಿದೆ. ಮೋರಿ ಸ್ವಚ್ಛ ಮಾಡಿಸಬೇಕಿದೆ.
ವಾರ್ಡ್ ವ್ಯಾಪ್ತಿ: ಮೇದರ್ ಬ್ಲಾಕ್, ಯಾದವಗಿರಿ ಕೈಗಾರಿಕೆ ಪ್ರದೇಶ, ಜಾವಾ ಹಿಂಭಾಗ, ಮಂಜುನಾಥಪುರ, ಜೋಡಿ ತೆಂಗಿನ ಮರ ಸ್ಮಶಾನ, ಹೈವೇ ವೃತ್ತ, ಹಲೀಂ ನಗರ, ನ್ಯೂ ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ, ಇರ್ವಿನ್ ರಸ್ತೆ, ಜಗಜೀವರಾಂ ವೃತ್ತ, ಜೆಎಲ್ಬಿ ರಸ್ತೆ, ಕೆಆರ್ಎಸ್ ರಸ್ತೆ, ಕಾಳಿದಾಸ ರಸ್ತೆ, ನಗರ ಪಾಲಿಕೆ ಅತಿಥಿಗೃಹ.
ದೇವಾರಾಜ ಮಾರುಕಟ್ಚೆ ಬಳಿ ಇರುವ ಹಣ್ಣಿನ ಮಂಡಿಯನ್ನು ತಿಲಕ್ನಗರದ ಬಳಿ ಇರುವ ಎಪಿಎಂಸಿಗೆ ಸ್ಥಳಾಂತರಿಸಿ ನಗರ ಸೌಂದರ್ಯ ಕಾಪಾಡುವುದು ಮೊದಲ ಆದ್ಯತೆಯ ಕೆಲಸ. ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿ ಎಪಿಎಂಸಿಯನ್ನು ಸಿದ್ಧತೆ ಮಾಡಿದ್ದರೂ ಅಲ್ಲಿಗೆ ಸ್ಥಳಾಂತರಿಸಲು ಪಾಲಿಕೆ ಆಯುಕ್ತರು ಮುಂದಾಗಬೇಕು. ಸ್ವಚ್ಛತೆಯ ಬಗ್ಗೆ ಮೊದಲಿನಿಂದಲೂ ಅದ್ಯತೆ ಮುಂದುವರಿಸಲಾಗುವುದು.
ವಾರ್ಡ್ ವ್ಯಾಪ್ತಿ: ದೇವರಾಜ ಮೊಹಲ್ಲಾ, ವಾಲ್ಮೀಕಿ ರಸ್ತೆ, ಕಾಳಿದಾಸ ರಸ್ತೆ, ದಾಸಪ್ಪ ವೃತ್ತ, ಜಗಜೀವನರಾಂ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಕಬೀರ್ ರಸ್ತೆ, ಶ್ರೀ ಟಾಕೀಸ್, ಕೆ.ಟಿ ರಸ್ತೆ. ಪ್ರಭಾ ಚಿತ್ರಮಂದಿರ, ಗಾಂಧಿವೃತ್ತ, ಅಶೋಕ ರಸ್ತೆ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಚಿಕ್ಕ ಗಡಿಯಾರ, ಡಿ. ದೇವರಾಜ ಅರಸ್ ರಸ್ತೆ, ಜನರಲ್ ಕಾರ್ಯಪ್ಪ ವೃತ್ತ, ವಿನೋಬ ರಸ್ತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.