ಸಿಎಂಗೆ ಪ್ರೊ. ಅನಂತಮೂರ್ತಿ ಪತ್ರ
ಮೈಸೂರು: ರಂಗಾಯಣದ ನಟರನ್ನು ಬೇರೆಡೆಗೆ ವರ್ಗ ಮಾಡುವುದು ಉಚಿತವಲ್ಲ. ಅವರ ಪ್ರಾಮುಖ್ಯತೆ ಇರುವುದು ಒಂದು ತಂಡವಾಗಿ. ಹೀಗಾಗಿ ತಂಡದ ಪ್ರಯೋಜನ ನಾಶ ಮಾಡಬಾರದು ಎಂದು ಭಿನ್ನವಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ. ಯು.ಆರ್. ಅನಂತಮೂರ್ತಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದಾರೆ. ರಂಗಾಯಣವು ಬಿ.ವಿ. ಕಾರಂತರ ಕೊಡುಗೆ. ಅಲ್ಲಿನ ಕಲಾವಿದರು ತಜ್ಞರಾಗಿದ್ದಾರೆ. ಅವರನ್ನು ಬೇರೆ ಶಾಲೆಗಳಿಗೆ ಅತಿಥಿ ಉಪನ್ಯಾಸಕರನ್ನಾಗಿ ಕಳುಹಿಸಬೇಕೆ ಹೊರತು ವರ್ಗಾವಣೆ ಮಾಡಬಾರದು. ರಂಗಾಯಣದ ತಂಡವನ್ನೆ ಒಡೆದುಬಿಟ್ಟರೆ ಆ ತಂಡ ಮತ್ತೆಲ್ಲಿಯೂ ಸಿಗುವುದಿಲ್ಲ. ರಂಗಾಯಣ ಕಲಾವಿದರ ಮೇಲಿನ ಕರುಣೆಯಿಂದ ನಾನು ಹೇಳುತ್ತಿಲ್ಲ. ಹಲವು ವರ್ಷಗಳ ನಟನೆಯ ಫಲವಾಗಿ ಕ್ರಮೇಣ ಒಂದು ತಂಡ ನಮಗೆ ಸಿಕ್ಕಿದೆ ಎಂದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.