ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಲವರು ಕೆಜೆಪಿ ಸೇರ್ಪಡೆ

Parashurama
Updated On : 25 Mar 2013, 11:21 am

ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಮಾ.25
ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ದುರ್ಬಲಗೊಳ್ಳುತ್ತಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ಮಾಜಿ ಶಾಸಕ ಡಾ. ಎನ್.ಎಲ್. ಭಾರತೀಶಂಕರ್ ಹೇಳಿದರು.
ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿವಿಧ ಗ್ರಾಪಂ ಸದಸ್ಯರು, ಮಹಿಳಾ ಸಂಘದ ಪ್ರತಿನಿಧಿಗಳು, ನಾಯಕ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವ ಮುಖಂಡರು ಕೆಜೆಪಿಗೆ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಾಯಕತ್ವ ಬೆಂಬಲಿಸಬೇಕಾದ ಬನ್ನೂರು ಭಾಗದ ಜನರೇ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿರುವುದರಿಂದ ಕಾಂಗ್ರೆಸ್‌ಗೆ ಕೆಜೆಪಿ ಸಮಬಲ ಸ್ಪರ್ಧೆ ನೀಡಲಿದೆ ಎಂದರು.
ಗೊರವನಹಳ್ಳಿ ಮತ್ತು ಹುಣಸಗಹಳ್ಳಿ ಗ್ರಾಮಗಳು ಈಗ ಕೆಜೆಪಿ ವಶವಾಗಿದೆ. ಒಟ್ಟಾರೆ ಮೇ 5ರ ಚುನಾವಣೆ ವ್ಯಕ್ತಿಯ ವರ್ಚಸ್ಸು ಮತ್ತು ಅಭಿವೃದ್ಧಿ ಕಾರ್ಯದ ಮೇಲೆ ಅವಲಂಬಿತವಾಗಿದೆ ಎಂದು ಭಾರತೀಶಂಕರ್ ತಿಳಿಸಿದರು.
ಇದೇ ವೇಳೆ ಗ್ರಾಪಂ ಸದಸ್ಯರಾದ ರಾಜೇಶ, ಕುಮಾರ್, ಬಸವರಾಜೇಗೌಡ, ಶಿವಣ್ಣ, ಲಿಂಗರಾಜು, ಮಹಿಳಾ ಸಂಘದ ಶೋಭಾ, ಮಂಗಳ, ವಿಜಯಾಂಭ, ನಾಯಕ ಸಮುದಾಯದ ನಾಗಯ್ಯ, ರತ್ನಮ್ಮ, ಪುಟ್ಟತಾಯಮ್ಮ, ರಾಜು, ಸಿದ್ದರಾಜು, ರೇವಣ್ಣ, ಸ್ವಾಮಿ, ಮಹದೇವ, ನಾಗರಾಜು, ನಿಂಗಪ್ಪ, ರಾಜೇಶ್, ಸುರೇಶ್, ಮಹದೇವ್, ಸಂತೋಷ್, ಮಾದೇಶ್, ಉಮೇಶ್, ಶ್ರೀನಿವಾಸ್, ಜಯಮೂರ್ತಿ, ಸಿ.ಎನ್. ಶಿವರಾಜು, ಹೆಮ್ಮಿಗೆ ಕಾಳಯ್ಯ, ಕಾವೇರಿಪುರ ಶಶಿಕುಮಾರ್, ಮುಸ್ಲಿ ಸಮುದಾಯದ ಅಸ್ಲಂ (ಮುನ್ನಾ), ನವೀದ್ ಇತರರು ಕೆಜೆಪಿಗೆ ಸೇರ್ಪಡೆಯಾದರು.
ಸಭೆಯಲ್ಲಿ ಕೆಜೆಪಿ ಕ್ಷೇತ್ರಾಧ್ಯಕ್ಷ ವಿರೇಶ್, ಜಿಲ್ಲಾ ಉಪಾಧ್ಯಕ್ಷ ಲಿಂಗೇಗೌಡ, ಯುವ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಂ. ಶಾಂತಮೂರ್ತಿ, ಎಸ್ಸಿ ಘಟಕದ ಅಧ್ಯಕ್ಷ ಸಿದ್ದರಾಜು, ಎಸ್ಟಿ ಘಟಕದ ಅಧ್ಯಕ್ಷ ಕುಮಾರ್, ಮುಖಂಡ ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments