ಈ ದೇಗುಲಕ್ಕೆ ಬರೀ 9 ಸಾವಿರ ಅನುದಾನ!
ಕ.ಪ್ರ.ವಾರ್ತೆ ಮೈಸೂರು ಮಾ.26
250 ವರ್ಷಗಳಷ್ಟು ಹಳೆಯದಾದ ನಗರದ ಹಳೇ ಸಂತೇಪೇಟೆಯಲ್ಲಿರುವ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನಕ್ಕೆ ಮುಜಾರಾಯಿ ಇಲಾಖೆ ವಾರ್ಷಿಕವಾಗಿ ನೀಡುತ್ತಿರುವ ಅನುದಾನ ಎಷ್ಟು ಗೊತ್ತೆ. ಕೇವಲ 9 ಸಾವಿರ.
ಈ ದೇವಸ್ಥಾನಕ್ಕೆ ಸೇರಿದ ಅಂಗಡಿಗಳಿಂದ ತಿಂಗಳಿಗೆ ಒಟ್ಟು 20 ಸಾವಿರ ಬಾಡಿಗೆ ಹಣ ಇಲಾಖೆಯ ಖಜಾನೆ ಸೇರುತ್ತಿದೆ. ಇಲಾಖೆಯ ಕೊಳ್ಳುಬಾಕ ಸಂಸ್ಕೃತಿಯಿಂದ ರಾಜರ ಕಾಲದ ದೇವಸ್ಥಾನ ಸರಿಯಾದ ನಿರ್ವಹಣೆ ಇಲ್ಲದೆ ಅಳಿವಿನಂಚಿಲ್ಲಿದೆ ಎಂದು ಆಗಮಿಕರಾದ ರಾಧಾಕೃಷ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು ರಥೋತ್ಸವ: ಮಾ. 27ರ ಬೆಳಗ್ಗೆ 10ಕ್ಕೆ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನದ ರಥೋತ್ಸವ ಜರುಗಲಿದ್ದು, ಹಳೇ ಸಂತೇಪೇಟೆಯಿಂದ ಆರಂಭವಾಗಿ ಸಯ್ಯಾಜಿರಾವ್ ರಸ್ತೆ, ನಗರಪಾಲಿಕೆ ಮುಂಭಾಗ, ದಳವಾಯಿ ವಿದ್ಯಾಸಂಸ್ಥೆಯ ಮುಖಾಂತರ ಸ್ವಸ್ಥಾನಕ್ಕೆ ಮರಳಲಿದೆ.
ಪಾಲಿಕೆ ಸದಸ್ಯ ಪ್ರಶಾಂತ್ಗೌಡ, ಕರಿಯಪ್ಪ, ಶಿವಮೂರ್ತಿ, ರಾಮಲಿಂಗಯ್ಯ, ಚಂದ್ರಕುಮಾರ್, ರಥ ನಿರ್ಮಾತೃ ಮಹದೇವ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.