ಮೈಸೂರು

ಸ್ವತಂತ್ರ ಅಭ್ಯರ್ಥಿ ಕಣಕ್ಕೆ: ಎಚ್ಚರಿಕೆ

ಮೈಸೂರು: ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದ ಮುಖಂಡರಿಗೆ ಯಾವುದೇ ರಾಜಕೀಯ ಪಕ್ಷಗಳು ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಉಪ್ಪಾರ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಉಪ್ಪಾರ ಸಮುದಾಯವಿದ್ದು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕ ಮತದಾರರಿದ್ದಾರೆ. ಆದ್ದರಿಂದ ವರುಣ, ಕೆ.ಆರ್. ನಗರ, ಪಿರಿಯಾಪಟ್ಟಣ, ಗುಂಡ್ಲುಪೇಟೆ ಹಾಗೂ ಹನೂರು ಈ ಕ್ಷೇತ್ರಗಳಿಗೆ ಸ್ಪರ್ಧಿಸಲು ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಸಂಘದ ಕಾನೂನು ಸಲಹೆಗಾರ ಎನ್. ಉಮೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಜೆಡಿಎಸ್ ಈ ಬಾರಿ ಟಿಕೆಟ್ ನೀಡಿದರೆ ಸಮುದಾಯವು ಆ ಪಕ್ಷಕ್ಕೆ ಬೆಂಬಲ ನೀಡಲಿದೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವಲ್ಲಿ ಶ್ರಮಿಸಲಿದೆ ಎಂದು ತಿಳಿಸಿದರು. ಯಾವುದೇ ಪಕ್ಷಗಳು ಈ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡದೆ ಹೋದರೆ, ವರುಣದಿಂದ ಆರ್. ಮಹದೇವು, ಕೆ.ಆರ್. ನಗರದಿಂದ ಆರ್. ಮಂಜುನಾಥ್, ಗುಂಡ್ಲುಪೇಟೆಯಿಂದ ಎಸ್. ಮಹದೇವು, ಪಿರಿಯಾಪಟ್ಟಣದಿಂದ ವಿಷಕಂಠಯ್ಯ ಅಥವಾ ಮಲ್ಲಯ್ಯ, ಹಾಗೂ ಹನೂರಿನಿಂದ ಕೃಷ್ಣಶೆಟ್ಟಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂದರು. ಮುಖಂಡರಾದ ಎಸ್. ಮಹದೇವು, ಕೃಷ್ಣಶೆಟ್ಟಿ, ಆರ್. ಮಹದೇವು, ಮಂಜುನಾಥ್ ಇದ್ದರು.
ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ
ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದ ಜೆಎಸ್‌ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ 2013- 14ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 1 ರಿಂದ 7ನೇ ತರಗತಿಯ ಕನ್ನಡ ಮಾಧ್ಯಮಕ್ಕೆ, 1 ಹಾಗೂ 5ನೇ ತರಗತಿಯ ಇಂಗ್ಲಿಷ್ ಮಾಧ್ಯಮಕ್ಕೆ ಹಾಗೂ 8ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ ಅರ್ಜಿ ಆಹ್ವಾನಿಸಿದ್ದು, ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬಡತನ ರೇಖೆಯೊಳಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಶ್ರೀಕ್ಷೇತ್ರದಲ್ಲಿ ಏ. 1ರಿಂದ ಅರ್ಜಿ ವಿತರಿಸಲಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಮೇ 10 ರೊಳಗೆ ಸಲ್ಲಿಸಬಹುದು.  ಅಂಚೆ ಮೂಲಕ ಅರ್ಜಿ ಪಡೆಯಲಿಚ್ಛಿಸುವವರು ವಿದ್ಯಾರ್ಥಿ ಬಯಸುವ ತರಗತಿಯ ವಿವರ, ಸ್ವವಿಳಾಸವುಳ್ಳ 5 ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್‌ಎಸ್ ಸಂಸ್ಥೆಗಳು, ಸುತ್ತೂರು, ನಂಜನಗೂಡು- 571129. ಇಲ್ಲಿಗೆ ಕಳುಹಿಸಬಹುದು. ದೂ. 08221- 232323, 232653 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!