ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕರಡಿ ದಾಳಿ: ಅರಣ್ಯ ವೀಕ್ಷಕನಿಗೆ ಗಾಯ

Rashmi Kasaragodu
Updated On : 10 May 2013, 1:42 am

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬುಧವಾರ ಕರಡಿಯೊಂದು ಅರಣ್ಯ ವೀಕ್ಷಕನ ಮೇಲೆ ದಾಳಿ ನಡೆಸಿ, ಆತನ ಕಣ್ಣು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣಿಗೆ ತೀವ್ರ ಗಾಯಗೊಳಿಸಿರುವ ಘಟನೆ ನಡೆದಿದೆ. ನಾಗರಹೊಳೆ ವಲಯದಲ್ಲಿ ವಾಚರ್ ಮಧು ಗಾಯಗೊಂಡವರು. ಇವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಧು ಸೇರಿದಂತೆ ನಾಲ್ವರು ಗಸ್ತು ತಿರುಗುತ್ತಿದ್ದಾಗ ಆತನ ಮೇಲೆ ಎರಗಿದ ಕರಡಿ ನೋಡನೋಡುತ್ತಿದ್ದಂತೆ ಆತನ ಮುಖಕ್ಕೆ ಪೆಟ್ಟು ಕೊಟ್ಟು ಕಣ್ಣನ್ನು ಕಿತ್ತುಹಾಕಿತು. ಮುಖ, ಕೈ-ಕಾಲುಗಳು ಗಾಯಗೊಂಡು ತೀವ್ರ ರಕ್ರಸ್ರಾವವಾಗಿದೆ. ಸ್ಥಳದಲ್ಲಿದ್ದ ಮೂವರು ಕರಡಿಯನ್ನು ಓಡಿಸಿದ ನಂತರ, ತಕ್ಷಣವೇ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಗೋಕುಲ್ ತಿಳಿಸಿದ್ದಾರೆ. ಆಸ್ಪತ್ರೆಗೆ ಪಿಸಿಸಿಎಫ್ ಬಿ.ಕೆ. ಸಿಂಗ್, ಸಿಸಿಎಫ್ ಹೊಸಮಠ್ ಭೇಟಿ ನೀಡಿದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement