ಸಿದ್ದರಾಮಯ್ಯ, ಪ್ರಸಾದ್ ಗೆಲವಿಗೆ ಇಡುಗಾಯಿ
ನಂಜನಗೂಡು: ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಹಾಗೂ ನಂಜನಗೂಡು ಕ್ಷೇತ್ರದಿಂದ ವಿ. ಶ್ರೀನಿವಾಸ ಪ್ರಸಾದ್ ಆಯ್ಕೆಯಾಗಿದ್ದಕ್ಕೆ ವೀರಮಡಿವಾಳ ಮಾಚಿದೇವರ ಯುವಕರ ಸಂಘದಿಂದ ನಂಡನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಮುಂಭಾಗ ಇಡುಗಾಯಿ ಸೇವೆ ಪೂರೈಸಲಾಯಿತು. ಮುಖಂಡರಾದ ಎಸ್.ಸಿ. ಬಸವರಾಜು, ಸಿ.ಎಸ್. ಮಹೇಶ್, ಎನ್. ನಾಗರಾಜು, ಎಸ್.ಎಂ. ನಾಗರಾಜು, ಎಸ್.ಸಿ. ನಾಗೇಶ್ ಮೊದಲಾದವರು ಇದ್ದರು.