ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಲಿತಕಲಾ ವಿವಿ ಸ್ಥಾಪನೆಗೆ ಚಾಲನೆ

Rashmi Kasaragodu
Updated On : 13 May 2013, 12:10 pm

ಕ.ಪ್ರ.ವಾರ್ತೆ   ಮೈಸೂರು   ಮೇ 12
ರಾಜ್ಯ ಸರ್ಕಾರ ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ ಲಲಿತಕಲಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಚಾಲನೆ ನೀಡಲಾಗಿದೆ ಎಂದು ವಿವಿ ವಿಶೇಷಾಧಿಕಾರಿ ಡಾ.ಎಸ್.ಸಿ. ಪಾಟೀಲ ಹೇಳಿದರು.
ವಿವಿ ಸ್ಥಾಪಿಸುವ ಸಂಬಂಧ ಪೂರ್ವಭಾವಿ ಕೆಲಸಗಳನ್ನು ನಿರ್ವಹಿಸಲು ಸರ್ಕಾರ ನನ್ನನ್ನು ವಿಶೇಷಾಧಿಕಾರಿಯಾಗಿ ನೇಮಿಸಿತ್ತು. ಇಲ್ಲಿಯ ತನಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಯಾವುದೇ ಕೆಲಸ ಆರಂಭಿಸಿರಲಿಲ್ಲ. ಇದೀಗ ನೀತಿ ಸಂಹಿತೆ ಮುಕ್ತಾಯಗೊಂಡಿದ್ದು, ವಿವಿ ಸಂಬಂಧಿತ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2012- 13ನೇ ಸಾಲಿನ 1 ಸಾವಿರ ಕೋಟಿಯನ್ನು ವಿವಿ ಸ್ಥಾಪನೆಗೆ ಮೀಸಲಿಡಲಾಗಿದೆ. ರಾಜ್ಯದಲ್ಲಿ 110 ಲಲಿತಕಲಾ ಕಾಲೇಜುಗಳಿವೆ. ಹಂಪಿ ವಿವಿಯಲ್ಲಿಯೇ ಸುಮಾರು 71 ಕಾಲೇಜುಗಳಿವೆ. ಬೆಂಗಳೂರು, ಧಾರವಾಡ, ಗುಲ್ಬರ್ಗ, ತುಮಕೂರು, ದಾವಣಗೆರೆ, ಮೈಸೂರು, ಬಿಜಾಪುರ, ಮಂಗಳೂರು ವಿವಿಗಳ ಅಧೀನದಲ್ಲಿ ಈ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದವು. ಇನ್ನೂ ಮುಂದೆ ಈ ಕಾಲೇಜುಗಳು ಲಲಿತಕಲಾ ವಿವಿ ವ್ಯಾಪ್ತಿಗೆ ಒಳಪಡುತ್ತವೆ ಎಂದರು.
ಲಲಿತಕಲಾ ವಿವಿಯು ಕರ್ನಾಟಕಕ್ಕೆ ಸೀಮಿತವಾದ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿರದೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ. ಅವುಗಳಲ್ಲಿ ಚಿತ್ರ, ಶಿಲ್ಪ, ಛಾಯಾಚಿತ್ರ, ವಾಣಿಜ್ಯಕಲೆ, ಮುದ್ರಣಕಲೆ, ಕಂಪ್ಯೂಟರ್, ಅನಿಮೇಷನ್ ಮುಂತಾದ ಲಲಿತ ಕಲೆಯ ವಿಷಯಗಳು ಲಭ್ಯವಿರುತ್ತವೆ. ವಿವಿಗೆ ವಿಶಿಷ್ಟ ಸ್ವರೂಪ ರೂಪಿಸಬೇಕಾಗಿರುವುದರಿಂದ ತಜ್ಞರು, ಕಲಾವಿದರು, ಕಲಾಸಕ್ತರು ತಮ್ಮ ಸಲಹೆ- ಸೂಚನೆ ನೀಡಬಹುದಾಗಿದೆ ಎಂದು ಅವರು ಕೋರಿದರು.
ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement