ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಗೆಲವಿಗೆ ಶ್ರಮಿಸಿ: ವಿಜಯಶಂಕರ್

Rashmi Kasaragodu
Updated On : 13 May 2013, 11:32 am

ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಮೇ 13
ಈ ಹಿಂದೆ ನಮ್ಮ ಅಭ್ಯರ್ಥಿಯಾಗಿದ್ದ ಸಣ್ಣಮೊಗೇಗೌಡರ ನಿಧನದಿಂದ ಈಗ ಮತ್ತೊಬ್ಬ ಸಮರ್ಥ ಅಭ್ಯರ್ಥಿಯನ್ನು ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆಗೆ ಬಿಜೆಪಿ ನಿಲ್ಲಿಸಿದ್ದು, ಕಾರ್ಯಕರ್ತರು ಮತದಾರರ ಮನವೊಲಿಸಿದರೆ ನಮ್ಮ ಪಕ್ಷದ ಅಭ್ಯರ್ಥಿ ವಿಜಯಿ ಆಗುವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯ್‌ಶಂಕರ್ ಹೇಳಿದರು.
ಇಲ್ಲಿನ ಬೆಟ್ಟದಪುರ ರಸ್ತೆಯಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟಿಸಿ ನಂತರ ಮಾತನಾಡಿ, ಭಿನ್ನಾಭಿಪ್ರಾಯದಿಂದ ಹಾಗೂ ಕಿತ್ತಾಟದಿಂದ ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಸೋಲುಂಟಾಗಿದ್ದರೂ ದೇಶದ ಆಡಳಿತ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಬಿಜೆಪಿಗೆ ಉತ್ತಮ ದಿನಗಳು ಕಾದಿವೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಆರ್.ಟಿ. ಸತೀಶ್ ಮಾತನಾಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟಸ್ವಾಮಿ, ಲೋಕಪಾಲಯ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಎಂ. ರಾಜೇಗೌಡ, ವಿಕ್ರಂರಾಜ್, ಬೆಮ್ಮತ್ತಿ ಚಂದ್ರು, ಪ್ರಭಾಕರ ಆರಾಧ್ಯ, ಪ್ರಸನ್ನಕೇಶವ, ಪಿ.ಜೆ. ರವಿ, ರಾಜಿಕ್ ಪಾಷಾ, ಆರ್. ಮೋಹನ್, ಶಿವಸ್ವಾಮಿ, ಸೈಯದ್ ನಿಜಾಮ್‌ಉದ್ದಿನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement