ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಭಿವೃದ್ಧಿ ಕಾರ್ಯವೇ ಗೆಲವಿಗೆ ಶ್ರೀರಕ್ಷೆ: ಮಹದೇವ್

Vishwanath S
Updated On : 15 May 2013, 12:08 pm

ಕ.ಪ್ರ.ವಾರ್ತೆ ,  ಪಿರಿಯಾಪಟ್ಟಣ ,  ಮೇ 14 ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಮಾಡಿರುವ ಜನಪರ ಅಭಿವೃದ್ಧಿ ಕೆಲಸಗಳೇ ಪಕ್ಷದ ಗೆಲವಿಗೆ ಸಹಕಾರಿಯಾಗಲಿದೆ ಎಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಹೇಳಿದರು.
ತಾಲೂಕಿನ ಕಂಪಲಾಪುರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ರಾಜ್ಯಾದ್ಯಂತ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ. ನಮ್ಮ ಪಕ್ಷ ಪ್ರತಿಪಕ್ಷದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸದೆ ಇದ್ದರೆ ನಾವು ಪ್ರಬಲವಾಗಿ ವಿರೋಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿಯಾದ ತಮ್ಮನ್ನು ಗೆಲ್ಲಿಸಿದೆಯಾದಲ್ಲಿ ಕುಮಾರಸ್ವಾಮಿ ಅವರ ಕೈಬಲಪಡಿಸುವುದರ ಜೊತೆಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಜಿಪಂ ಉಪಾಧ್ಯಕ್ಷೆ ಎಂ.ಕೆ. ಸುಚಿತ್ರಾ, ಸದಸ್ಯ ಎಂ.ಪಿ. ಚಂದ್ರೇಶ್, ತಾಪಂ ಸದಸ್ಯರಾದ ಆರ್.ಎಸ್. ಮಹದೇವ್, ರಘುನಾಥ್, ಪಕ್ಷದ ತಾ. ಪ್ರಧಾನ ಕಾರ್ಯದರ್ಶಿ ಕೆ.ಕೆ. ಕುಮಾರ್, ಮುಖಂಡರಾದ ನಾರಾಯಣಗೌಡ, ಜಯಣ್ಣ, ರಾಮಣ್ಣ, ವಾಜಿದ್, ರಾಜೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement