ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಸ್ಸೆಸ್ಸೆಲ್ಸಿ:ಭರತ್‌ಗೆ 608 ಅಂಕ

Vishwanath S
Updated On : 15 May 2013, 12:06 pm

ಮೈಸೂರು: 2012- 13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭರತ್ ಯೋಗೇಂದ್ರ ಅವರಿಗೆ 608 ಅಂಕ ಲಭಿಸಿದ್ದು, ಪ್ರಥಮ ಭಾಷೆ 122, ದ್ವಿತೀಯ ಭಾಷೆ 98, ತೃತೀಯ ಭಾಷೆ 97, ಗಣಿತ 96, ವಿಜ್ಞಾನ 97, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾರೆ. ಇವರು ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಅಧ್ಯಕ್ಷ ಎಂ. ಯೋಗೇಂದ್ರ ಅವರ ಪುತ್ರ.

ಚಿನ್ನದ ನಾಣ್ಯಕ್ಕೆ ಶೇ. 7.5 ರಿಯಾಯಿತಿ
ಮೈಸೂರು: ಅಕ್ಷಯ ತೃತೀಯ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯು ಚಿನ್ನದ ಎಲ್ಲ ನಾಣ್ಯಗಳ ಖರೀದಿಯ ಮೇಲೆ ಶೇ. 7.5ರ ವಿಶೇಷ ರಿಯಾಯಿತಿ ಘೋಷಿಸಿದೆ ಎಂದು ಮೈಸೂರು ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರು ಹೇಳಿದ್ದಾರೆ. ಭಾರತೀಯ ಅಂಚೆ ಇಲಾಖೆಯಿಂದ ಮಾರಲ್ಪಡುವ ನಾಣ್ಯಗಳು 24 ಕ್ಯಾರೆಟ್ ಶೇ. 99.99 ಅಪರಂಜಿ ಸ್ವಿಸ್ ಚಿನ್ನದ ನಾಣ್ಯಗಳಾಗಿದ್ದು, ಭಾರತೀಯ ಅಂಚೆ ಲಾಂಛನ ಹೊಂದಿರುತ್ತವೆ ಮತ್ತು ಸುರಕ್ಷಿತವಾದ ಸುಭದ್ರ ಪ್ಯಾಕ್‌ಗಳಲ್ಲಿ 0.5 ಗ್ರಾಂ, ಒಂದು ಗ್ರಾಂ, 5 ಗ್ರಾಂ, 8 ಗ್ರಾಂ, 10 ಗ್ರಾಂ, 20 ಗ್ರಾಂ ಮತ್ತು 50 ಗ್ರಾಂ ನಾಣ್ಯಗಳು ದೊರೆಯುತ್ತವೆ. ವಿಶೇಷ ರಿಯಾಯಿತಿಯು ಮೇ 15 ಮತ್ತು 16 ವರೆಗೆ ಮಾತ್ರ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಅಂಚೆ ಪಾಲಕರು, ಮೈಸೂರು ಪ್ರಧಾನ ಅಂಚೆ ಕಚೇರಿ ದೂ. 2417303, ಅಂಚೆ ಪಾಲಕರು, ಸರಸ್ವತಿಪುರಂ, ಮೈಸೂರು, ದೂ. 2417320, ಅಂಚೆ ಪಾಲಕರು ಲಕ್ಷ್ಮೀಪುರಂ, ಮೈಸೂರು, ದೂ. 2417315 ಸಂಪರ್ಕಿಸಬಹುದು.

ವೈದ್ಯಕೀಯ ಶಿಬಿರ
ಮೈಸೂರು: ನಗರದ ನಾಗರಿಕರಿಗಾಗಿ ಬೃಂದಾವನ ಬಡಾವಣೆಯ ಚರಕ ಸರ್ಕಾರಿ ಆಯುರ್ವೇದ ಸ್ನಾತಕೋತ್ತರ ಕೇಂದ್ರದಲ್ಲಿ ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ವಿಶೇಷ ಉಚಿತ ಚಿಕಿತ್ಸಾ ಶಿಬಿರವನ್ನು  ಮೇ 18 ರವರೆಗೆ ಹಮ್ಮಿಕೊಂಡಿದೆ. ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ನಡೆಯವುದು. ಮೈಸೂರಿನ ಜನತೆ ಈ ವಿಶೇಷ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೇಂದ್ರದ ಮುಖ್ಯಸ್ಥರು ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ. 9844667769 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement