ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಕಾಯಕ ಆಧಾರಿತ ಸಮಾಜ ನಿರ್ಮಾಣಕ್ಕೆ ಬಸವಣ್ಣ ಬುನಾದಿ'

Vishwanath S
Updated On : 15 May 2013, 12:07 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಮೇ 14
12ನೇ ಶತಮಾನದಲ್ಲಿಯೇ ಕಾಯಕ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿ ಕಲ್ಯಾಣ ರಾಜ್ಯದ ಕನಸು ಕಂಡಿದ್ದ ಜಗಜ್ಯೋತಿ ಬಸವೇಶ್ವರರು ಜಗತ್ತಿಗೆ ಮಾದರಿ ಎಂದು ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಆರ್. ನವೀನ್ ಹೇಳಿದರು.
ಇಲ್ಲಿನ ಬಸ್ ಘಟಕದಲ್ಲಿ ಸಾರಿಗೆ ಸಂಸ್ಥೆಯ ಬಸವ ಬಳಗದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಾಯಕ ಸಾರಿಗೆ ಅಧಿಕಾರಿ ಎ.ಟಿ. ಚಂದ್ರಶೇಖರ್, ಘಟಕದ ಅಧಿಕಾರಿ ಎಲ್.ಬಿ. ಕದಂ, ಬಳಗದ ಗೌರವಾಧ್ಯಕ್ಷ ಕೆ.ಎಚ್. ಸ್ವಾಮಿ, ಅಧ್ಯಕ್ಷ ಪಿ.ಎ. ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಟಿ.ಸಿ. ಚಂದ್ರಶೇಖರ್, ಉಪಾಧ್ಯಕ್ಷ ಬಿ.ಎ. ಮಹದೇವ, ನಿರ್ದೇಶಕರಾದ ಬಿ.ವಿ. ಹರೀಶ್, ಘಟಕದ ಆಡಳಿತಾಧಿಕಾರಿಗಳು, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement