ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

Vishwanath S
Updated On : 14 May 2013, 11:52 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 14
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಜಿಲ್ಲೆಯಲ್ಲಿ ಮೇ 20  ರಿಂದ 25 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕರಿಂದ ದೂರು ಅಹವಾಲು ಸ್ವೀಕರಿಸುವರು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಎಂ. ಜಗದೀಶ್‌ಪ್ರಸಾದ್ ಹೇಳಿದ್ದಾರೆ.
ದೂರು ಅರ್ಜಿಗಳನ್ನು ವಿತರಿಸಿ, ಭರ್ತಿ ಮಾಡಿದ ಹಾಗೂ ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪತ್ರದಲ್ಲಿ ದೂರು ನೀಡಬಹುದಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಅವರು ಕೋರಿದ್ದಾರೆ.
ಕಾರ್ಯಕ್ರಮದ ವಿವರ: ಮೇ 20, ಚಾಮುಂಡಿ ಪಿಡಬ್ಲ್ಯೂಡಿ ಅತಿಥಿ ಗೃಹ, ಮೈಸೂರು. ಮೇ 21, ಪಿಡಬ್ಲ್ಯೂಡಿ ಅತಿಥಿ ಗೃಹ, ಹುಣಸೂರು. ಮೇ 22, ಪಿಡಬ್ಲ್ಯೂಡಿ ಅತಿಥಿ ಗೃಹ, ಕೆ.ಆರ್. ನಗರ. ಮೇ 23, ತಾಲೂಕು ಕಚೇರಿ ಆವರಣ, ನಂಜನಗೂಡು. ಮೇ 24, ಪಿಡಬ್ಲ್ಯೂಡಿ ಅತಿಥಿ ಗೃಹ, ಪಿರಿಯಾಪಟ್ಟಣ. ಮೇ 25, ಪಿಡಬ್ಲ್ಯೂಡಿ ಅತಿಥಿ ಗೃಹ, ಎಚ್.ಡಿ. ಕೋಟೆ ಮತ್ತು ಟಿ.ನರಸೀಪುರ.
ಲೋಕಾಯುಕ್ತ ಅಧಿಕಾರಿಗಳ ಆಯಾ ತಾಲೂಕು ಭೇಟಿ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದು, ತಮ್ಮ ಇಲಾಖೆಗಳಲ್ಲಿ ಬಾಕಿಯಿರುವ ಸಾರ್ವಜನಿಕರ ಅರ್ಜಿಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಹಾಗೂ ಈ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಕ್ತ ಸಹಕಾರ ಒದಗಿಸುವಂತೆ ಸೂಚಿಸಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement