ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಶ್ಲೀಲ ವೆಬ್‌ಸೈಟ್ ನಿಷೇಧಿಸಲು ಆಗ್ರಹ

Vishwanath S
Updated On : 15 May 2013, 11:55 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 15
ದೇಶದಲ್ಲಿ ಎಲ್ಲಾ ರೀತಿಯ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕು ಎಂದು ರೆಸ್ಕ್ಯೂ ಸಂಸ್ಥೆಯ ಸಿಇಒ ಅಭಿಷೇಕ್ ಕ್ಲೀಫೋರ್ಡ್ ಜಾಕೋಬ್ ಆಗ್ರಹಿಸಿದರು.
ವಿದ್ಯಾರ್ಥಿಗಳು ಹೆಚ್ಚಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಇವರಿಗೆ ಕೆಲವು ಕಂಪ್ಯೂಟರ್ ಅಂಗಡಿಯವರು ಅಶ್ಲೀಲ ಚಿತ್ರ, ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳು ಕ್ರೂರವಾದ ಅಶ್ಲೀಲ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಂಡಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೆಸ್ಕ್ಯೂ ಸಂಸ್ಥೆಯಿಂದ ಕಾರ್ಯಾಚರಣೆ ನಡೆಸಿದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ರಹಸ್ಯವಾಗಿ ಚಿತ್ರಿಕರಿಸಲಾಗಿದೆ. ಮೈಸೂರು ಮತ್ತು ಕೊಳ್ಳೇಗಾಲದ ಕೆಲವು ಅಂಗಡಿಗಳ ಮೇಲೆ ಪೊಲೀಸರ ಸಹಾಯದಿಂದ ದಾಳಿ ನಡೆಸಿದ್ದು, ತನಿಖೆ ನಡೆಯುತ್ತಿದೆ ಎಂದರು.
ನಮ್ಮ ಸರ್ವೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿರುವ ಶೇ.75 ಯುವಕರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾರೆ. ಶೇ. 60 ವಿದ್ಯಾರ್ಥಿನಿಯರು ಸಹ ಅಶ್ಲೀಲ ಚಿತ್ರ ವೀಕ್ಷಿಸುತ್ತಾರೆ. ಪದವಿ ವಿದ್ಯಾರ್ಥಿಗಳು ವಾರಕ್ಕೆ 2 ಗಂಟೆ ಕ್ರೂರ ಚಿತ್ರ ವೀಕ್ಷಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ, ದೇಶದ ಸಂಸ್ಕೃತಿ, ಸಂಬಂಧಗಳು ಹಾಳಾಗುತ್ತಿದೆ. ಹೀಗಾಗಿ ದೇಶದ ಎಲ್ಲಾ ಅಶ್ಲೀಲ ಚಿತ್ರ ವೆಬ್‌ಸೈಟ್ ನಿಷೇಧಿಸಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಜೊತೆಗೆ ನೀತಿ ಬೋಧನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಂಸ್ಥೆಯ ಅಧ್ಯಕ್ಷ ಅವಿತ್ ಆನಂದ್, ವಿಜಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement