ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ 6 ವರ್ಷದ ಸಂಭ್ರಮ
ಕ.ಪ್ರ.ವಾರ್ತೆ , ಮೈಸೂರು , ಮೇ 15
ನಗರದ ಕಲಾಸುರಚಿಯ ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ 6 ವರ್ಷ ತುಂಬಿದ ಸಂಭ್ರಮ. ಈ ಸಂಭ್ರಮಾಚರಣೆ ಅಂಗವಾಗಿ ಕಲಾಸುರುಚಿಯು ಮೇ 18ರ ಸಂಜೆ 4.30ಕ್ಕೆ ಸುರುಚಿ ರಂಗಮನೆಯಲ್ಲಿ ಕಥೆ ಕೇಳುವ ಕಾರ್ಯಕ್ರಮ ಆಯೋಜಿಸಿದೆ. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪತ್ರಕರ್ತ ರವೀಂದ್ರ ಭಟ್ಟ ಐನಕೈ ವಿಶೇಷ ಅತಿಥಿಗಳಾಗಿ ಆಗಮಿಸುವರು ಎಂದು ಸಂಸ್ಥೆಯ ವಿಜಯ ಸಿಂಧುವಳ್ಳಿ ತಿಳಿಸಿದ್ದಾರೆ.