ಜೂ.1ರಿಂದ ನೇರ ಸಹಾಯಧನ ವರ್ಗಾವಣೆ
ಕ.ಪ್ರ.ವಾರ್ತೆ , ಮೈಸೂರು , ಮೇ 15
ಜಿಲ್ಲಾದ್ಯಂತ ಜೂ. 1ರಿಂದ ಅಡುಗೆ ಅನಿಲ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ, ಬ್ಯಾಂಕ್ ಖಾತೆ ಗ್ಯಾಸ್ ಸಹಾಯಧನ ನೇರ ವರ್ಗಾವಣೆಯನ್ನು ಕೇಂದ್ರ ತೈಲ ಮತ್ತು ಅನಿಲ ಮಂತ್ರಾಲಯದ ಸೂಚನೆಯಂತೆ ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದ್ದಾರೆ.
ಈವರೆಗೂ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸದಿರುವ ಅನಿಲ ಗ್ರಾಹಕರು, ಕೂಡಲೆ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸುವುದು. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸಲ್ಲಿಸದಿರುವವರು ಕೂಡಲೆ ತಮ್ಮ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಆಧಾರ್ ಸಂಖ್ಯೆ ನೀಡುವಂತೆ ಅವರು ಸೂಚಿಸಿದ್ದಾರೆ.
ಬ್ಯಾಂಕ್ ಖಾತೆ ಹೊಂದಿರದ ಗ್ರಾಹಕರು ಕೂಡಲೆ ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಆಧಾರ್ ಮಾಹಿತಿ ಸಲ್ಲಿಸಬೇಕು. ಗ್ಯಾಸ್ ಎಜೆನ್ಸಿಗೆ ಸಲ್ಲಿಸುವ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಮಾಹಿತಿ ಸೀಡಿಂಗ್ ಮಾಡಿರುವ ಬ್ಯಾಂಕ್ ಖಾತೆ ಸಂಖ್ಯೆಯದೆ ಆಗಿರಬೇಕು. ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಗ್ಯಾಸ್ ಏಜೆನ್ಸಿಯಲ್ಲಿ ಡ್ರಾಪ್ ಬಾಕ್ಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಗ್ರಾಹಕರು ಡ್ರಾಪ್ ಬಾಕ್ಸ್‌ನಲ್ಲಿ ಈ ಕೆಳಕಂಡ ದಾಖಲಾತಿ ಹಾಕಬಹುದು ಎಂದು ಅವರು ತಿಳಿಸಿದ್ದಾರೆ.
ಬ್ಯಾಕ್ ಪಾಸ್ ಪುಸ್ತಕದ ಪ್ರತಿ (ಎಎಫ್‌ಎಸ್‌ಸಿ ಕೋಡ್, ಅಕೌಂಟ್ ನಂಬರ್ ಮತ್ತು ಹೆಸರು, ವಿವರಗಳನ್ನು ಸ್ಪಷ್ಟವಾಗಿ ಕಾಣುತ್ತಿರಬೇಕು. ಆಧಾರ್ ಪ್ರತಿ, ಎಲ್‌ಪಿಜಿ ಗ್ರಾಹಕ ಸಂಖ್ಯೆಯುಳ್ಳ ಮಾಹಿತಿ ನೀಡಬೇಕು.
ಹಲವು ಗ್ರಾಹಕರು ಈಗಾಗಲೆ ಅನಿಲ ಗ್ರಾಹಕರ ವಿವರ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯ ವಿವರಗಳನ್ನು ಸಂಬಂಧಪಟ್ಟ ಅನಿಲ ವಿತರಕರಿಗೆ ಸಲ್ಲಿಸಿರುತ್ತಾರೆ. ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಮ್ಯಾಪ್ಪಿಂಗ್ ಸಹ ಮಾಡಿಸಿರುತ್ತಾರೆ. ಗ್ರಾಹಕರು ಸಲ್ಲಿಸಿರುವ ಮಾಹಿತಿಯನ್ನು ಸಂಬಂಧಪಟ್ಟ ಆಯಿಲ್ ಕಂಪನಿಯವರು ಅಪ್‌ಡೇಟ್ ಮಾಡಿದ್ದು, ಗ್ರಾಹಕರು ಈ ಬಗ್ಗೆ ಕೆಳಕಂಡ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಅಥವಾ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯವರಿಗೆ ಕರೆ ಮಾಡಿ ಸಹ ಮಾಹಿತಿ ಪಡೆಯಬಹುದು. ಮಾಹಿತಿ ಸರಿಯಾಗಿದ್ದಲ್ಲಿ ಮತ್ತೊಮ್ಮೆ ಮಾಹಿತಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಐಸಿ- ಮೊ. 9448289974, ಎಚ್‌ಪಿಸಿ- ಮೊ. 9449041967, ಬಿಪಿಸಿ- 9448282945 ಸಂಪರ್ಕಿಸಬಹುದು.