ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾಂಸ ಮಾರಾಟ ಅಂಗಡಿ ಮೇಲೆ ದಾಳಿ

Vishwanath S
Updated On : 16 May 2013, 12:00 pm

ಕ.ಪ್ರ.ವಾರ್ತೆ ,  ಹುಣಸೂರು ,  ಮೇ 15
ಅನಧಿಕೃತ ಗೋಮಾಂಸ ಮತ್ತು ಕೋಳಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಬೀಗ ಹಾಕುವಂತೆ ಆದೇಶಿಸಿದರು.
ಇಲ್ಲಿನ ಕಾರ್ಖಾನೆ ರಸ್ತೆ ಕಲ್ಕುಣಿಕೆ ವೃತ್ತಗಳಲ್ಲಿ ಅನಧಿಕೃತವಾಗಿ ಕೋಳಿ ಮತ್ತು ಕುರಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆ, ಬುಧವಾರ ಮಧ್ಯಾಹ್ನ ಪುರಸಭೆ ವ್ಯವಸ್ಥಾಪಕ ಪ್ರಕಾಶ್ ಮತ್ತು ತಂಡದವರೊಂದಿಗೆ ತೆರಳಿ ಅನಧಿಕೃತ ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸಿ ಬೀಗ ಹಾಕಿದರು.
ಮಾಂಸದ ಅಂಗಡಿ ಮುಂದೆಯೇ ಗೋಮಾಂಸ ಮಾರಾಟ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಬೀಗ ಜಡಿದು, ಶಬ್ಬಿರ್ ನಗರಕ್ಕೆ ತೆರಳುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಅಂಗಡಿ ಮಾಲೀಕರು ಮತ್ತು ಕಸಾಯಿಖಾನೆ ನೌಕರರಿಗೆ ಎಚ್ಚರಿಕೆ ನೀಡಿ, ಸ್ಥಳದಲ್ಲಿದ್ದ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡರು.
ಗೋಮಾಂಸದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಪುರಸಭಾ ಆರೋಗ್ಯಾಧಿಕಾರಿ ಸತೀಶ್‌ಗೆ ಸೂಚಿಸಿ ಲೈಸೆನ್ಸ್ ನೀಡುವವರೆಗೆ ಅಂಗಡಿ ತೆಗೆಯದಂತೆ ಎಚ್ಚರಿಕೆ ನೀಡಿದರು. ದಾಳಿಯಲ್ಲಿ ಉಪವಿಭಾಗಾಧಿಕಾರಿ ವಿನೂತಪ್ರಿಯಾ ಅಧಿಕಾರಿಗಳಾದ ಸ್ವಾಮಿಗೌಡ, ವ್ಯವಸ್ಥಾಪಕ ಪ್ರಕಾಶ್ ಇದ್ದರು.
ಪುರಸಭೆ ವ್ಯಾಪ್ತಿಯಿಂದ 5 ಕಿಮೀ ಹೊರಗಿರಬೇಕಾದ ಗೋಮಾಂಸದ ಅಂಗಡಿಗಳು, ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಹೃದಯ ಭಾಗದಲ್ಲೇ ಮಾಂಸ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸರ್ಕಾರದ ಆದೇಶದಂತೆ 5 ಕಿಮೀ ದೂರದಲ್ಲಿ ಮಾತ್ರ ಗೋಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.
ಶಬ್ಬೀರ್‌ನಗರದ ಕಸಾಯಿಖಾನೆಯಿಂದ ಅಕ್ಕಪಕ್ಕದ ಬಡಾವಣೆಗಳಲ್ಲಿ ದುರ್ನಾತ ಬೀರುತ್ತಿದೆ. ಪಕ್ಕದಲ್ಲೆ ಶಾಲಾ ಕಾಲೇಜುಗಳಿವೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಕಸಾಯಿಖಾನೆ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement