ಸಿದ್ದರಾಮಯ್ಯ, ಎಂಕೆಎಸ್ಗೆ ಕುರುಬರ ಸಂಘ ಅಭಿನಂದನೆ
ಕ.ಪ್ರ.ವಾರ್ತೆ , ಮೈಸೂರು , ಮೇ 15
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಂ.ಕೆ. ಸೋಮಶೇಖರ್ ಅವರನ್ನು ಇಲ್ಲಿನ ಗುಂಡೂರಾವ್ ನಗರದ ಬೀರೇಶ್ವರ ಕುರುಬರ ಸಂಘವು ಅಭಿನಂದಿಸಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಇಲ್ಲಿನ ರಾಮಮಂದಿರದ ಬಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಲಾಯಿತು ಎಂದು ಸಂಘದ ಕಾರ್ಯದರ್ಶಿ ಲಿಂಗರಾಜು ತಿಳಿಸಿದ್ದಾರೆ. ಶಾಸಕ ಎಂ.ಕೆ. ಸೋಮಶೇಖರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಅವರು ಒತ್ತಾಯಿಸಿದ್ದಾರೆ.