ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿದ್ದರಾಮಯ್ಯ ಸಿಎಂ: ಅಭಿಮಾನಿಗಳ ಸಂಭ್ರಮಾಚರಣೆ

Vishwanath S
Updated On : 16 May 2013, 12:03 pm

ಕ.ಪ್ರ.ವಾರ್ತೆ ,  ನಂಜನಗೂಡು ,  ಮೇ 15
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಗೀಕಳ್ಳಿಹುಂಡಿ ಗ್ರಾಮದಲ್ಲಿ ಅಹಿಂದ ತಾಲೂಕು ಸಂಚಾಲಕ ಜಿ.ಎಂ. ಸೋಮಣ್ಣ ಹಾಗೂ ಮಾಜಿ ಧರ್ಮದರ್ಶಿ ಎಸ್. ಪುಟ್ಟಸ್ವಾಮಿ ನೇತೃತ್ವದಲ್ಲಿ ಗ್ರಾಮದಲ್ಲಿ ಪಾನಕ, ನೀರು- ಮಜ್ಜಿಗೆಯನ್ನು ರಸ್ತೆಯಲ್ಲಿ ಹಾದು ಹೋಗುವ ಬಸ್ಸು, ಟೆಂಪೋ ಪ್ರಯಾಣಿಕರಿಗೆ ನೀಡುವ ಮೂಲಕ ಸಂಭ್ರಮ ಆಚರಿಸಲಾಯಿತು.
ಇದೇ ವೇಳೆ ಮಹದೇವ ಗೌಡ, ಮಾದೇಗೌಡ, ಮಹದೇವನಾಯಕ, ಕನಕದಾಸ ಯುವಕರ ಸಂಘದ ಶಿವಕುಮಾರ್, ಗೀಕಳ್ಳಿ ಎಂ. ನಂಜೇಗೌಡ, ಕಾಂಗ್ರೆಸ್ ಮುಖಂಡರಾದ ಜಿ.ಎಸ್. ಗಿರಿಯಾ, ಜಿ.ಎಂ. ಮಹದೇವು, ಕುಳ್ಳೇಗೌಡ, ಲೋಕೇಶ್, ಕೃಷ್ಣ, ಮಲ್ಲಣ್ಣ, ಅಪ್ಪಯ್ಯ, ಬೀರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement