ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುತ್ತೂರಿನಲ್ಲಿ ಕೃಷಿ ಅನುವುಗಾರರಿಗೆ ತರಬೇತಿ

Vishwanath S
Updated On : 16 May 2013, 12:03 pm

ಕ.ಪ್ರ.ವಾರ್ತೆ ,  ಸುತ್ತೂರು ,  ಮೇ 15
ನಂಜನಗೂಡು ತಾಲೂಕು ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾಲೂಕಿನ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಐದು ದಿನಗಳ ಕೃಷಿ ಅನುವುಗಾರಿಗೆ ತರಬೇತಿ ಕಾರ್ಯಕ್ರಮವನ್ನು ಗಂಗಾಧರ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ರೈತರಿಗೂ ಮತ್ತು ಇಲಾಖೆಗೂ ಸಂಪರ್ಕ ಸೇತುವೆಯಾಗಲು ಅನುವುಗಾರರು ಮುಖ್ಯಪಾತ್ರವಾಗಬೇಕೆಂದು ಹಾಗೂ ಕೃಷಿ ವಿಜ್ಞಾನಿಗಳನ್ನು ಭೇಟಿ ಮಾಡಿ ರೈತರಿಗೆ ಮಾಹಿತಿ ನೀಡಲು ಅನುವುಗಾರರು ಮುಂದಾಗಬೇಕೆಂದು ತಿಳಿಸಿದರು.
ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ರೈತರು ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆದರೆ ಮಣ್ಣಿನ ಆರೋಗ್ಯ ಮತ್ತು ಮನುಷ್ಯನ ಆರೋಗ್ಯಕ್ಕೂ ಉತ್ತಮವಾಗುತ್ತದೆ. ಅಲ್ಲದೆ, ರೈತರಿಗೆ ಎಣ್ಣೆಕಾಳುಗಳನ್ನು ಬೆಳೆಯುವುದರಿಂದ ರೈತರ ಆರ್ಥಿಕ ಮಟ್ಟ ಹೆಚ್ಚಿಸಲು ರೈತರಿಗೆ ಮಾಹಿತಿ ನೀಡಲು ಅನುವುಗಾರರ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಪ್ರಾಂಶುಪಾಲ ಅರುಣ್ ಬಾಳೇಮಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುವುಗಾರರು ಬಿತ್ತನೆ ಕಾರ್ಯಕ್ಕೆ ಸರಿಯಾಗಿ ರೈತರಿಗೆ ಸಲಹೆ ತಿಳಿಸಲು ಮುಂದೆ ಬರಬೇಕೆಂದು ತಿಳಿಸಿದರು. ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಸರಿಯಾಗಿ ಪಡೆಯಲು ರೈತರಿಗೆ ಅನುವುಗಾರರು ತಿಳಿಸಲು ಕೋರಿದರು. ವಿಜ್ಞಾನಿಗಳಾದ ರಾಜಣ್ಣ, ಕಳ್ಳಿಮನಿ, ಕೆಂಪರಾಜ ಅರಸ್ ಹಾಗೂ ಸುಧಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement