25 ರಂದು ಚಿಂತನ- ಮಂಥನ
ಮೈಸೂರು: ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆಯು ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ಮೇ 25 ರಂದು ರೋಟರಿ ಭವನದಲ್ಲಿ ಬುದ್ಧ ಮತ್ತು ಸಂವಿಧಾನ ಆಶಯಗಳ ಕುರಿತ ಚಿಂತನ- ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ನಾಡಿನ ಹಲವು ಮಂದಿ ಚಿಂತಕರು, ಸಾಹಿತಿಗಳು, ಮಠಾಧೀಶರು, ಬೌದ್ಧ ಬಿಕ್ಕುಗಳು ಭಾಗವಹಿಸುವರು ಎಂದು ವೇದಿಕೆಯ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.