ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಸ್ತಿ ತೆರಿಗೆ ಪಾವತಿಗೆ ಜೂ. 30ರ ಗಡುವು

Vishwanath S
Updated On : 17 May 2013, 9:51 am

ಕ.ಪ್ರ.ವಾರ್ತೆ ,   ಟಿ. ನರಸೀಪುರ ,   ಮೇ 17
ತಾಲೂಕಿನ ಬನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಪುರಸಭೆ ಜೂ.30ರ ಗಡುವು ನೀಡಿದೆ. ಬನ್ನೂರು ಪುರಸಭಾ ವ್ಯಾಪ್ತಿಯಲ್ಲಿ ಬಿಲ್ ಕಲೆಕ್ಟರ್‌ಗಳು ಮನೆ ಮನೆಗೆ ತೆರಳಿ ತೆರಿಗೆ ವಸೂಲಿ ಮಾಡುವ ಪದ್ಧತಿ ಕೊನೆಗಾಣಿಸಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಕಡ್ಡಾಯವಾಗಿ ಆಸ್ತಿ ತೆರಿಗೆ ಪಾವತಿ ಮಾಡಬೇಕಾದ್ದರಿಂದ ಜೂ. 30ರೊಳಗೆ ಹೊಸ ಸ್ವಯಂ ಘೋಷಿತ ತೆರಿಗೆ ಪದ್ಧತಿಯಂತೆ ತೆರಿಗೆ ಪಾವತಿಸಬೇಕು.
ನಂತರ ಪಾವತಿಸುವ ತೆರಿಗೆಯ ಮೇಲೆ ಶೇ.2ರಷ್ಟು ದಂಡವನ್ನು ಪ್ರತಿ ತಿಂಗಳ ಲೆಕ್ಕದಲ್ಲಿ ವಿಧಿಸಲಾಗುತ್ತದೆ. ತೆರಿಗೆ ನಿರ್ಧಾರಣೆ ತಪ್ಪಿಸಿಕೊಂಡವರ ಅಥವಾ ತೆರಿಗೆ ಪಾವತಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಪುರಸಭೆಗೆ ಇದ್ದು, ವಿವರ ಪಟ್ಟಿಯನ್ನು ಸಲ್ಲಿಸಲು ವಿಫಲನಾದ ಮಾಲೀಕರಿಗೆ ಅಧಿಕಾರಿಗಳು ನಿರ್ಧರಿಸುವ ತೆರಿಗೆ ಮೊತ್ತದ ಜೊತೆಗೆ ಶೇ.50ರಷ್ಟು ದಂಡ ವಿಧಿಸಲಾಗುವುದು. ಅಲ್ಲದೆ ಕಾನೂನು ಬಾಹಿರವಾಗಿ ನಿರ್ಮಿಸಿದ ಕಟ್ಟಡಗಳಿಗೆ ತೆರಿಗೆಯ ಎರಡರಷ್ಟು ಮೊತ್ತದ ದಂಡ ವಿಧಿಸುವುದಾಗಿ ಮುಖ್ಯಾಧಿಕಾರಿ ಎಸ್. ಲೋಕೇಶ್ ಎಚ್ಚರಿಸಿದ್ದಾರೆ.
ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ: ಬೇಸಿಗೆ ಕಾಲವಾದ್ದರಿಂದ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯ ನೀರನ್ನು ಲಭ್ಯತೆಯ ಸಂದರ್ಭದಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆ ಬನ್ನೂರು ಪಟ್ಟಣದ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ನೀರಿನ ತೆರಿಗೆಯನ್ನೂ ಆಯಾಯ ತಿಂಗಳ 5ರೊಳಗೆ ಪಾವತಿಸಬೇಕು. ನೀರಿನ ತೆರಿಗೆ ಪಾವತಿದಾರರು ಕಚೇರಿಗೆ ಖುದ್ದು ಭೇಟಿ ನೀಡಿ ಪಾವತಿಸಬೇಕು. ಕುಡಿಯುವ ನೀರಿನ ಕೊಳಾಯಿ ಸಂಪರ್ಕಕ್ಕೆ ಅಥವಾ ನಲ್ಲಿಗೆ ನೇರವಾಗಿ ವಿದ್ಯುತ್ ಮೋಟಾರ್ ಅಳವಡಿಸಿಕೊಂಡಿದ್ದರೆ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಪುರಸಭೆಗೆ ಇದೆ. ಒಂದೇ ಮನೆಗೆ ಒಂದೆ ನಲ್ಲಿ ಸಂಪರ್ಕ ಇರಬೇಕು. ಎರಡಿದ್ದರೆ ದಂಡ ಹಾಕಲಾಗುತ್ತದೆ. ವ್ಯಾಪಾರ ಉದ್ದಿಮೆದಾರರು ಪರವಾನಗಿ ಪಡೆಯುವುದು ಕಡ್ಡಾಯ. ಪ್ರತಿಯೊಬ್ಬರು ಪುರಸಭೆಯ ನಿಯಮವನ್ನು ಪಾಲಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement