ಕೆ.ಆರ್. ನಗರದಲ್ಲಿ ಭಗೀರಥ ಜಯಂತಿ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 17
ಭಗೀರಥ ಮಹರ್ಷಿಯವರ 51ನೇ ವರ್ಷದ ಜಯಂತಿಯನ್ನು ಇಲ್ಲಿನ ಉಪ್ಪಾರ ಸಮಾಜ ಮತ್ತು ಗೀತಾ ಮಹಿಳಾ ಸಮಾಜದ ವತಿಯಿಂದ ಶ್ರೀ ರಾಮಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಿತು.
ಗೀತಾ ಮಹಿಳಾ ಸಮಾಜದ ಸದಸ್ಯರು ಶುಕ್ರವಾರ ಬೆಳಗ್ಗೆ ಹಳೆಎಡತೊರೆಯಲ್ಲಿರುವ ಕಾವೇರಿ ನದಿಯಿಂದ 101 ಕುಂಬ ಕಳಸಗಳಲ್ಲಿ ನದಿ ನೀರನ್ನು ತಂದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಉಪ್ಪಾರರ ಶ್ರೀರಾಮಮಂದಿರದಲ್ಲಿ ಸಮಾವೇಶಗೊಂಡು ವಿಶೇಷ ಪೂಜೆ ಸಲ್ಲಿಸಿ, ಭಗೀರಥರ ಕರುಣೆಯಿಂದ ಉತ್ತಮ ಮಳೆ-ಬೆಳೆ ಆಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಮಾಜದ ಯಜಮಾನರಾದ ರಾಮಚಂದ್ರ, ನಾರಾಯಣಪ್ಪ, ಅಧ್ಯಕ್ಷ ಕೆ.ಎಲ್. ಜಯರಾಂ, ಸದಾಶಿವಲಿಂಗಯ್ಯ, ಗೀತಾಮಹಿಳಾ ಸಮಾಜದ ತ್ರಿವೇಣಿ, ಅಂಬುಜ, ಜಿ. ಭಾಗ್ಯ, ರಾಣಿ, ಸುಲೋಚನ, ಶೋಭಾ, ಶಾರದಮ್ಮ, ಮಂಜುನಾಥ್ ಇದ್ದರು.