ತಾಲೂಕು ಕುರುಬರ ಸಂಘದಿಂದ ಸಿಎಂಗೆ ಅಭಿನಂದನೆ
ಎಚ್.ಡಿ. ಕೋಟೆ: ತಾಲೂಕು ಕುರುಬ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದಿಸಿ, ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಜನಾಂಗದವರ ಏಳಿಗೆಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮುಖ್ಯಮಂತ್ರಿ, ಜನಾಂಗದ ಮುಖಂಡರ ಜೊತೆ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಪ್ರಗತಿಯಲ್ಲಿ ಇರುವ ಎಲ್ಲ ಭವನಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಈ ವಿಚಾರದಲ್ಲಿ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ ಕೋಟೆ ಹೇಳಿದರು. ಕಾರ್ಯದರ್ಶಿ ರಾಜೇಗೌಡ, ಮಹದೇವ್, ಕಾರ್ತಿಕ್ ಕುಮಾರ್, ಯತೀಶ್ ಕುಮಾರ್, ಸಿದ್ದರಾಮು, ಚಂದ್ರೇಗೌಡ, ರಮೇಶ್, ಕೋಮಾರೇಗೌಡ, ಕರಿಯಪ್ಪ, ಮಹದೇವ್, ನಾಗರಾಜು, ಕುಮಾರಸ್ವಾಮಿ, ಸಿದ್ದರಾಮಪ್ಪ ಗಣ್ಯರು ಭಾಗವಹಿಸಿದ್ದರು.