ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಲು ಮನವಿ
ನಂಜನಗೂಡು: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕು ಉಪ್ಪಾರ ಜನಜಾಗೃತಿ ಸಂಘ ಒತ್ತಾಯಿಸಿದೆ. ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ಉಪ್ಪಾರ ಜನಾಂಗದ ಪುಟ್ಟರಂಗಶೆಟ್ಟಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಳಮಟ್ಟದಿಂದ ಬೆಳೆದು ಬಂದವರರಾಗಿದ್ದು, ಎಲ್ಲ ವರ್ಗಗಳ ಅಭಿವೃದ್ಧಿಪರ ನಿಲುವು ಹೊಂದಿದವರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಮಹದೇವಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಜು ಹೇಳಿದ್ದಾರೆ.
'ಮಂಜುನಾಥ್ಗೆ ಸಚಿವ ಸ್ಥಾನ ನೀಡಿ'
ಹುಣಸೂರು: ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಮೈಸೂರು ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಹೆಸರಿಡುವಂತೆ ತಾ. ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷ ಚಲ್ಲಹಳ್ಳಿ ಪಿ. ಮಹದೇವ್ ಮನವಿ ಮಾಡಿದ್ದಾರೆ.
ನಾಳೆ ಕೃತಿಗಳ ಬಿಡುಗಡೆ
ಮೈಸೂರು: ರತ್ನಶ್ರೀ ಪ್ರಕಾಶನದ ವತಿಯಿಂದ ಮೇ 19ರ ಸಂಜೆ 4ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಾಹಿತಿ ಆರ್.ರವಿಶಂಕರ್ ಅವರ ಕೊನೆಯ ಕಥೆ ಕಾದಂಬರಿ ಹಾಗೂ ಚೈತ್ರಯಾತ್ರೆ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಲಿದೆ. ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಆಶೀರ್ವದಿಸುವರು. ಸಾಹಿತಿ ಬನ್ನೂರು ಕೆ. ರಾಜು ಉದ್ಘಾಟಿಸುವರು. ಡಾ.ಲತಾ ರಾಜಶೇಖರ್ ಕವನ ಸಂಕಲನ ಹಾಗೂ ಡಾ. ಮಳಲಿ ವಸಂತಕುಮಾರ್ ಕಾದಂಬರಿ ಲೋಕಾರ್ಪಣೆ ಮಾಡುವರು.
ವಿದ್ಯುತ್ ವ್ಯತ್ಯಯ
ನಂಜನಗೂಡು: ನಂಜನಗೂಡು ಪಟ್ಟಣದ ಆರ್ಪಿ ರಸ್ತೆ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮೇ 19, 21 ಹಾಗೂ 23 ರಂದು ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ. ಬೆಳಗ್ಗೆ 9 ರಿಂದ 6 ರವರೆಗೆ ನಂಜನಗೂಡು ಬಡಾವಣೆ ಪ್ರದೇಶ, ಶ್ರೀರಾಮಪುರ, ಶಂಕರಪುರ, ಆನಂದಪುರ, ವಿದ್ಯಾನಗರ, ಶಂಕರಪುರ ಬಡಾವಣೆ, ಸರಸ್ವತಿ ಕಾಲೋನಿ, ನೀಲಕಂಠಪುರ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.