ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಂಡಿ ನೋವಿಗೆ ಆರ್ಥೋಗ್ಲೈಡ್ ಕ್ನೀ ಸಿಸ್ಟಮ್‌ನಿಂದ ಚಿಕಿತ್ಸೆ

Vishwanath S
Updated On : 17 May 2013, 9:54 am

ಕ.ಪ್ರ.ವಾರ್ತೆ ,   ಮೈಸೂರು ,   ಮೇ 17
ಮಂಡಿ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಆರ್ಥೋಗ್ಲೈಡ್ ಮೆಡಿಕಲ್ ಕ್ನೀ ಸಿಸ್ಟಮ್ ಸರ್ಜರಿ ಮೂಲಕ ಗುಣಪಡಿಸುವಲ್ಲಿ ನಗರದ ವಿದ್ಯಾರಣ್ಯ ಆಸ್ಪತ್ರೆ ಯಶಸ್ವಿಯಾಗಿದೆ.
ನಾಗರಾಜು ಎಂಬ 50 ವರ್ಷದ ವ್ಯಕ್ತಿಯೊಬ್ಬರು ಸತತ ಮಂಡಿ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಆರ್ಥೋಫೆಡಿಕ್ ಸರ್ಜನ್ ಡಾ.ಬಿ.ಎಚ್. ಮಂಜುನಾಥ್ ಮತ್ತು ಕೆ. ರವೀಂದ್ರನಾಥ್ ಅವರು ಆರ್ಥೋಗ್ಲೈಡ್ ಮೆಡಿಕಲ್ ಕ್ನೀ ಸಿಸ್ಟಮ್ ಸರ್ಜರಿ ಮೂಲಕ ಗುಣಪಡಿಸಿದ್ದಾರೆ.
ಈ ರೀತಿಯ ಶಸ್ತ್ರಚಿಕಿತ್ಸೆ ದೇಶದಲ್ಲೆ 9 ಕಡೆ ನಡೆಯುತ್ತಿದ್ದು, ಈ ಪೈಕಿ ಮೈಸೂರಿನ ವಿದ್ಯಾರಣ್ಯ ಆಸ್ಪತ್ರೆ ಸಹ ಒಂದು. ಮಂಡಿ ಕೀಲು ನೋವಿನಿಂದ ಬಳಲುವ ರೋಗಿಗಳು ಟಿಕೆಆರ್ ಅಂತಹ ಸರ್ಜರಿಯ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಇಂತಹ ರೋಗಿಗಳಿಗೆ ಈ ಆಧುನಿಕ ಆರ್ಥೋಗ್ಲೈಡ್ ಕ್ನೀ ಸಿಸ್ಟಮ್ ಬಳಕೆ ಮೂಲಕ ನೋವಿಲ್ಲದ, ರಕ್ತ ಸ್ರಾವವಿಲ್ಲದಂತ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಬಹುದು ಎಂದು ಆಸ್ಪತ್ರೆಯ ವೈದ್ಯ ಡಾ.ಬಿ.ಎಚ್. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥೋಸ್ಕೋಪಿ ಮೂಲಕ ಚಿಕಿತ್ಸೆ ನಡೆಸಿ, ಮಂಡಿ ಸವೆದಿರುವ ಭಾಗಗಳನ್ನು ಸರಿಪಡಿಸಿ ಆರ್ಥೋಗ್ಲೈಡ್ ಎಂಬ ಇಂಪ್ಲಾಂಟ್‌ನ್ನು ಮಂಡಿಗೆ ಅಳವಡಿಸಲಾಗುವುದು. ಇದನ್ನು ಡೆ ಕೇರ್ ಸರ್ಜರಿ ರೀತಿ ನಡೆಸಬಹುದು. ಕಾಲ ಕ್ರಮೇಣ ನೆಲದ ಮೇಲೆ ಹಾಗೂ ಭಾರತೀಯ ಶೌಚಾಲಯ ವ್ಯವಸ್ಥೆಯಲ್ಲೂ ಕೂರಬಹುದು. ಈ ಚಿಕಿತ್ಸೆಗೆ ಸುಮಾರು 80 ರಿಂದ 85 ಸಾವಿರ ವೆಚ್ಚ ವಾಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement